More

    ಡಿ.9ಕ್ಕೆ ‘ವಿಜಯಾನಂದ’ ಸೇರಿದಂತೆ 11 ಕನ್ನಡ ಚಿತ್ರಗಳ ಬಿಡುಗಡೆ …

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತೀವಾರ ಐದಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಶುಕ್ರವಾರ (ಡಿ.9) 11 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಸುದ್ದಿ ಇದೆ. ಇಷ್ಟೊಂದು ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿರುವುದು ಹೊಸದೇನಲ್ಲ. ಈ ವರ್ಷವೇ ಒಂದೆರಡು ಬಾರಿ, 10ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಈ ವಾರ ಸಹ ಅದು ಮುಂದುವರೆಯಲಿದೆ.

    ಇದನ್ನೂ ಓದಿ: ಈ ಚಿತ್ರದಲ್ಲಿರೋದು ಒಂದೇ ಪಾತ್ರ … ‘ರಾಘು’ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಹೊಸ ಪ್ರಯೋಗ …

    ಈ ವಾರದ ಚಿತ್ರಗಳ ಪೈಕಿ ಅತೀ ನಿರೀಕ್ಷಿತ ಚಿತ್ರವೆಂದರೆ ಅದು ‘ವಿಜಯಾನಂದ’. ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರವುಐದು ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಬರೀ ಭಾರತದಲ್ಲಷ್ಟೇ ಅಲ್ಲ, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ಮುಂತಾದ ದೇಶಗಳಲ್ಲಿ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ವಿಜಯಾನಂದ’ ಬಿಡುಗಡೆಯಾಗಲಿದೆ.

    ‘ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಿಹಾಲ್​ ರಜಪೂತ್​ ನಿರ್ವಹಿಸಿದ್ದು, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಭರತ್​ ಬೋಪಣ್ಣ, ಸಿರಿ, ಅರ್ಚನಾ ಗೊಟ್ಟಿಗೆ, ಶೈನ್​ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಆರ್​ಎಲ್​ ಪ್ರೊಡಕ್ಷನ್ಸ್​ ಲಾಂಛನದಲ್ಲಿ ಡಾ. ಆನಂದ್​ ಸಂಕೇಶ್ವರ ನಿರ್ಮಿಸಿರುರವ ಈ ಚಿತ್ರವನ್ನು ರಿಷಿಕಾ ಶರ್ಮ ನಿರ್ದೇಶನ ಮಾಡಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.

    ಇದನ್ನೂ ಓದಿ: ‘ಬ್ಯಾಡ್​ ಮ್ಯಾನರ್ಸ್​’ ಮುಕ್ತಾಯ; 2023ರ ಫೆಬ್ರವರಿಯಲ್ಲಿ ಬಿಡುಗಡೆ

    ಇದಲ್ಲದೆ ಪ್ರಮೋದ್​ ಅಭಿನಯದ ‘ಬಾಂಡ್​ ರವಿ’, ‘ಪಂಖುಂ’, ‘ಮೈಸೂರು ಡೈರೀಸ್​’, ‘ಡಿ 56’, ‘ಪ್ರಾಯಶಃ’, ‘ಸುನಾಮಿ 143’, ‘ಕ್ಷೇಮಗಿರಿಯಲ್ಲಿ ಕರ್ನಾಟಕ’, ‘ನಾನೇ ನರರಾಕ್ಷಸ’, ‘ಹೊಸ ದಿನಚರಿ’ ಮತ್ತು ‘ಬಿಹೈಂಡ್​ ಸಂವೊನ್​’ ಚಿತ್ರಗಳು ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಣೆಯಾಗಿವೆ. ಒಟ್ಟಾರೆ 11 ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಈಗಲೇ ಹೇಳುವುದು ಕಷ್ಟ. ಕಾರಣಾಂತರಗಳಿಂದ ಒಂದೆರಡು ಚಿತ್ರಗಳು ಹಿಂದಕ್ಕೆ ಸರಿದರೆ ಅಥವಾ ಅದರ ಬದಲು ಬೇರೆ ಚಿತ್ರಗಳು ಸೇರ್ಪಡೆಯಾದರೆ ಅದರಲ್ಲಿ ಆಶ್ಚರ್ಯವಿಲ್ಲ.

    ಕಾಲಿವುಡ್​ಗೆ ಹೊಂಬಾಳೆ ಎಂಟ್ರಿ; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಥಾ’ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts