More

    ಹಳಿತಪ್ಪಿದ ಬಾಂದ್ರಾ-ಜೋಧ್​ಪುರ ಸೂರ್ಯನಗರಿ ಎಕ್ಸ್​ಪ್ರೆಸ್​ ರೈಲಿನ 8 ಬೋಗಿಗಳು: ಸಹಾಯವಾಣಿ ಸಂಖ್ಯೆ ಬಿಡುಗಡೆ

    ರಾಜಸ್ಥಾನ: ಬಾಂದ್ರಾ-ಜೋಧ್​ಪುರ ಸೂರ್ಯನಗರಿ ಎಕ್ಸ್​ಪ್ರೆಸ್​ ರೈಲಿನ 8 ಬೋಗಿಗಳು ರಾಜಸ್ಥಾನದ ಪಾಲಿಯಲ್ಲಿ ಇಂದು(ಸೋಮವಾರ) ಮುಂಜಾನೆ ಅಳಿತಪ್ಪಿದೆ.

    ರೈಲು ಅಪಘಾತದಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಬಾಂದ್ರಾ ಟರ್ಮಿನಲ್​ನಿಂದ ಹೊರಟ ರೈಲು ಜೋಧ್‌ಪುರಕ್ಕೆ ತೆರಳುತ್ತಿತ್ತು. ಮುಂಜಾನೆ 3.27ರ ಸುಮಾರಿನಲ್ಲಿ ಮಾರ್ಗಮಧ್ಯೆ 8 ಬೋಗಿಗಳು ಹಳಿತಪ್ಪಿದ್ದು, ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಆತಂಕಗೊಂಡಿದ್ದರು. ಅದೃಷ್ಟವಶಾತ್​ ಪ್ರಾಥಮಿಕ ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಪ್ರಯಾಣಿಕರ ಮಾಹಿತಿಗಾಗಿ ರೈಲ್ವೆ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಪ್ರಯಾಣಿಕರ ಬಗ್ಗೆ ವಿಚಾರಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.
    ಜೋಧಪುರ: 0291- 2654979(1072), 0291- 2654993(1072), 0291- 2624125, 0291- 2431646
    ಪಾಲಿ: 0293-2250324, ಇನ್ನಿತರೆ ಮಾಹಿತಿಗಾಗಿ 138, 1072

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts