More

    10, 12 ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ; ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ಸಚಿವರು

    ಮುಂಬೈ : ಕರೊನಾ ಪರಿಸ್ಥಿತಿಯು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು 10ನೇ ತರಗತಿ ಮತ್ತು 12ನೇ ತರಗತಿಯ ಸ್ಟೇಟ್​ ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯದಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ಮೇನಲ್ಲಿ ಮತ್ತು 10ನೇ ತರಗತಿಯ ಪರೀಕ್ಷೆಗಳನ್ನು ಜೂನ್​ನಲ್ಲಿ ನಡೆಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವರಾದ ವರ್ಷ ಗಾಯಕ್​ವಾಡ್ ಇಂದು ತಿಳಿಸಿದ್ದಾರೆ.

    “ಪ್ರಸ್ತುತ ಸನ್ನಿವೇಶವು ಪರೀಕ್ಷೆ ನಡೆಸಲು ಪೂರಕವಾಗಿಲ್ಲ. ನಿಮ್ಮ ಆರೋಗ್ಯವೇ ನಮ್ಮ ಆದ್ಯತೆಯಾಗಿದೆ” ಎಂದು ಟ್ವಿಟರ್​ನಲ್ಲಿ ವಿಡಿಯೋ ಸಂದೇಶ ಶೇರ್ ಮಾಡಿರುವ ಗಾಯಕ್​ವಾಡ್​ ಅವರು, ಬದಲಾಗುವ ಪರಿಸ್ಥಿತಿಯನ್ನು ಗಮನಿಸಿ ನಿರ್ದಿಷ್ಟ ಪರೀಕ್ಷಾ ದಿನಾಂಕವನ್ನು ನಂತರದಲ್ಲಿ ಘೋಷಿಸಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: ‘ಅನುಭವವಿಲ್ಲದ ಸಚಿವ… ಹಠಮಾರಿ ಸಿಎಂ.. ಈಶ್ವರಪ್ಪ ಖಾತೆಯ ಹಣ ಕಾಣತ್ತೆ, ಸಮಸ್ಯೆ ಗೊತ್ತಾಗಲ್ವಾ?’

    “ಸಿಬಿಎಸ್ಇ​​, ಐಸಿಎಸ್​​ಸಿ, ಐಬಿ, ಕೇಂಬ್ರಿಡ್ಜ್ ಬೋರ್ಡ್​ಗಳಿಗೂ ನಾವು ಅವರ ಪರೀಕ್ಷಾ ದಿನಾಂಕಗಳನ್ನು ಮತ್ತೆ ಪರಿಗಣಿಸುವಂತೆ ಪತ್ರ ಬರೆಯಲಿದ್ದೇವೆ” ಎಂದು ಸಚಿವೆ ಗಾಯಕ್​ವಾಡ್​ ಹೇಳಿದ್ದಾರೆ. (ಏಜೆನ್ಸೀಸ್)

    ಕುರಾನ್ ಪದ್ಯಗಳನ್ನು ತೆಗೆಯಲು ಕೋರಿದ್ದ ಅರ್ಜಿ ವಜಾ

    ಕಡಿಮೆ ಅವಧಿಯ ವಿಮಾನ ಯಾನದಲ್ಲಿ ಉಪಾಹಾರ ಸೌಲಭ್ಯ ಇಲ್ಲ

    ಹತ್ತಿಯ ಬದಲಿಗೆ ಬಳಸಿದ ಮಾಸ್ಕ್​ಗಳನ್ನು ತುಂಬುತ್ತಿದ್ದ ಮ್ಯಾಟ್ರೆಸ್​​ ಫ್ಯಾಕ್ಟರಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts