More

    108 ಯೋಜನೆಯಡಿ ನಿರಂತರ ವೈದ್ಯಕೀಯ ಸೇವೆ, ಬಳ್ಳಾರಿ ಡಿಎಚ್‌ಒ ಎಚ್.ಎಲ್.ಜನಾರ್ದನ ಹೇಳಿಕೆ

    ಬಳ್ಳಾರಿ: ಜಿಲ್ಲೆಯಲ್ಲಿ 108 ಯೋಜನೆಯಡಿ ಯಾವುದೇ ಅಡಚಣೆ ಇಲ್ಲದೇ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ ತಿಳಿಸಿದ್ದಾರೆ. 33 ಆ್ಯಂಬುಲೆನ್ಸ್‌ಗಳು 108 ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. 132 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ಕಳೆದ ಎರಡು ತಿಂಗಳಲ್ಲಿ 64 ಕರೊನಾಕ್ಕೆ ಸಂಬಂಧಿಸಿದ, 1664 ಹೆರಿಗೆ, 88 ಅಪಘಾತ ಹಾಗೂ 1446 ಇತರ ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಜಿಲ್ಲೆ ಭೌಗೋಳಿಕವಾಗಿ ತುಂಬಾ ವಿಸ್ತಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನಿಂದ ದಾವಣಗೆರೆ, ಹಡಗಲಿಯಿಂದ ದಾವಣಗೆರೆ ಹಾಗೂ ಹಾವೇರಿ, ಹೊಸಪೇಟೆಯಿಂದ ಕೊಪ್ಪಳ ಜಿಲ್ಲೆಗಳಿಗೂ ರೋಗಿಗಳನ್ನು ಕರೆದುಕೊಂಡು ಹೋಗಿ ತುರ್ತು ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತಿದೆ. 108 ಎಲ್ಲ ಸಿಬ್ಬಂದಿಗೆ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್‌ಗಳನ್ನು ನೀಡಲಾಗಿದೆ ಎಂದು ಡಿಎಚ್‌ಒ ಜನಾರ್ದನ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts