More

    ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ

    ಕೋಲಾರ: 108 ಆ್ಯಂಬುಲೆನ್ಸ್​ ಚಾಲಕರು ಆಗಾಗ ಸಮಸ್ಯೆಗೆ ಒಳಗಾಗಿ ಪ್ರತಿಭಟನೆ ನಡೆಸಿದ್ದು ಹಳೇ ಸಂಗತಿ. ಇದೀಗ ವೇತನ ಹೆಚ್ಚಳ ಮಾಡದೆ ನೂರೆಂಟು ಸಮಸ್ಯೆ ಉಂಟಾಗಿ ಆ್ಯಂಬುಲೆನ್ಸ್​ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೂ ನಡೆದಿದೆ.

    ಕೋಲಾರ ತಾಲೂಕು ವೇಮಗಲ್ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಇಂಥದ್ದೊಂದು ಅಪಾಯಕಾರಿ ಪ್ರಯತ್ನಕ್ಕೆ ಮುಂದಾಗಿದ್ದ. ಅರುಣ್​ ಕುಮಾರ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದ ಆ್ಯಂಬುಲೆನ್ಸ್ ಚಾಲಕ.

    108 ಆ್ಯಂಬುಲೆನ್ಸ್ ಚಾಲಕರ ವೇತನ ಪರಿಷ್ಕರಣೆ ಮಾಡದೇ ಇರುವುದರಿಂದ ಸಂಬಳದಲ್ಲಿ ಹೆಚ್ಚಳವಾಗಿಲ್ಲ. ಇದರಿಂದ ನೂರೆಂಟು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಮನನೊಂದ ಈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನನ್ನು ಕೂಡಲೇ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    12 ವರ್ಷದಿಂದ ಕೆಲಸ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ವೇತನ ಪರಿಷ್ಕರಿಸಿಲ್ಲ. ಕೆಲವು ತಿಂಗಳಿನಿಂದ ಬೇಡಿಕೆ ಇಟ್ಟಿದ್ದರೂ ವೇತನ ಹೆಚ್ಚಿಸಿಲ್ಲ. ಈ ಹಿಂದೆ ಸಾಕಷ್ಟು ಮನವಿ ಮಾಡಿಕೊಂಡಿದ್ದರೂ ಈ ಸಲವೂ ಅದೇ ಹಳೆಯ ಸಂಬಳ ನೀಡಿದ್ದಕ್ಕೆ ಮನನೊಂದು ಇವರು ವಿಷ ಕುಡಿದಿದ್ದಾರೆ ಎಂದು ಸಂತ್ರಸ್ತರ ಜತೆಗಿದ್ದ ಇನ್ನೊಬ್ಬ ಚಾಲಕ ಆಸ್ಪತ್ರೆಯಲ್ಲಿ ಹೇಳಿರುವ ವಿಡಿಯೋ ಕೂಡ ಹರಿದಾಡುತ್ತಿದೆ.

    ಶಿಕ್ಷಕರ ಏಟಿಗೆ ಬಲಿಯಾದಳು ನಾಲ್ಕನೇ ತರಗತಿಯ ವಿದ್ಯಾರ್ಥಿನಿ!

    ಚಂದ್ರು ಮತ್ತೆ ಬರಲ್ಲ, ಆದ್ರೆ ಸತ್ಯಾಂಶ ಹೊರಬರುತ್ತೆ: ಶಾಸಕ ರೇಣುಕಾಚಾರ್ಯ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts