More

    ವಿಶ್ವದ ಅತ್ಯಂತ ಹಿರಿಯ ಸ್ಕೈಡೈವರ್​ ಎಂಬ ದಾಖಲೆ ಬರೆದು ಕೊನೆಯುಸಿರೆಳೆದ 104ರ ವೃದ್ಧೆ!

    ನವದೆಹಲಿ: ವಿಶ್ವದ ಅಂತ್ಯಂತ ಹಿರಿಯ ಸ್ಕೈಡೈವರ್​ ಎಂದು ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದ ಡೊರೊಥಿ ಹಾಫ್ನರ್​ (104) ತನ್ನ ಬಯಕೆಯನ್ನು ಈಡೇರಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ.

    ಇತ್ತೀಚೆಗಷ್ಟೇ ಡೊರೊಥಿ ಅವರು ಸ್ಕೈಡೈವ್​ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವಿಡಿಯೋ ನೋಡಿದ ಅಷ್ಟೂ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡರು. ಏಕೆಂದರೆ, 104ರ ಇಳಿ ವಯಸ್ಸಿನಲ್ಲಿ ಸ್ಕೈಡೈವ್​ ಮಾಡುವುದು ಸುಲಭದ ಮಾತಲ್ಲ, ಇದಕ್ಕಾಗಿ ಡಬಲ್​ ಗುಂಡಿಗೆ ಬೇಕು. ಡೊರೊಥಿ ಆ ಧೈರ್ಯವನ್ನು ಪ್ರದರ್ಶಿಸಿ, ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದಾರೆ.

    ಈ ಹಿಂದೆ ಈ ದಾಖಲೆ ಸ್ವೀಡನ್​ ಮೂಲದ 103 ವಯಸ್ಸಿನ ಮಹಿಳೆಯ ಹೆಸರಿನಲ್ಲಿತ್ತು. ಇದನ್ನು ಡೊರೊಥಿ ಅವರು ಇತ್ತೀಚೆಗಷ್ಟೇ ಮುರಿದಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​​: ಭಾರತಕ್ಕೆ ಸತತ 2ನೇ ಜಯ; ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್​​ಗಳಿಂದ ಮಣಿಸಿದ ಟೀಮ್ ಇಂಡಿಯಾ

    ಸೋಮವಾರ (ಅ.9) ಬೆಳಿಗ್ಗೆ ಬ್ರೂಕ್‌ಡೇಲ್ ಲೇಕ್ ವ್ಯೂ ಸೀನಿಯರ್ ಲಿವಿಂಗ್ ಕಮ್ಯುನಿಟಿ ಕಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಡೊರೊಥಿ ಅವರ ಆಪ್ತ ಸ್ನೇಹಿತ ಜೋ ಕಾನಂಟ್ ಹೇಳಿದರು. ಭಾನುವಾರ ರಾತ್ರಿ ನಿದ್ರೆಯಲ್ಲಿ ಇರುವಾಗಲೇ ಡೊರೊಥಿ ಮೃತಪಟ್ಟಿದ್ದಾರೆಂದು ಕಾನಂಟ್ ತಿಳಿಸಿದ್ದಾರೆ.

    ಡೊರೊಥಿ ಅವರು ಅ. 1 ರಂದು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಸ್ಕೈಡೈವ್ ಮಾಡಿದರು. ತರಬೇತುದಾರನ ಸಹಾಯದಿಂದ ಆಕಾಶದಿಂದ ಡೈವಿಂಗ್​ ಮಾಡಿದ ಡೊರೊಥಿ, ಸಂತೋಷದಿಂದಲೇ ಮಾತನಾಡುತ್ತಾ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯಿತು.

    ಸ್ಕೈಡೈವ್ ಮಾಡಿದ ಬಳಿಕ ಮಾತನಾಡಿದ ಡೊರೊಥಿ ಸ್ಕೈಡೈವ್​ ಮಾಡುವಾಗ ನನಗೆ ಯಾವುದೇಮ ರೀತಿಯ ಭಯವಾಗಲಿಲ್ಲ. ನನಗೆ ಸಂತೋಷವಾಯಿತು ಮತ್ತು ಆ ಕ್ಷಣವನ್ನು ನಾನು ತುಂಬಾ ಎಂಜಾಯ್​ ಮಾಡಿದೆ ಎಂದು ಮಾಧ್ಯಮಗಳಿಗೆ ಡೊರೊಥಿ ಪ್ರತಿಕ್ರಿಯಿಸಿದರು.

    ಡೊರೊಥಿ ಅವರ ಸಾವಿನ ಸುದ್ದಿ ತಿಳಿದು ಅವರ ಪ್ರೀತಿ-ಪಾತ್ರರಿಗೆ ತುಂಬಾ ದುಃಖವಾಗಿದೆ. ಜೀವನದ ಕೊನೆಯ ಹಂತದಲ್ಲಿ ಮೂಲೆಗೆ ಸೇರುವವರ ನಡುವೆ ಇಳಿ ವಯಸ್ಸಿನಲ್ಲೂ ಜೀವನೋತ್ಸಾಹ ತೋರಿದ ಡೊರೊಥಿ ಅವರ ಸಾವಿಗೆ ಅವರ ಆಪ್ತರು, ಬಂಧು-ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ. (ಏಜೆನ್ಸೀಸ್​)

    ಸಂಧಿವಾತ ಜಾಗೃತಿ ಅಗತ್ಯ: ಇಂದು ವಿಶ್ವ ಸಂಧಿವಾತ ದಿನ

    ಗುರುಮನೆ ದಸರಾ: ಲಿಂಗಸುಗೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ಮಹೋತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts