More

    ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂ. ಸಹಾಯಧನ; ಬಜೆಟ್​ನಲ್ಲಿ ಘೋಷಿಸಿದ್ದ ಯೋಜನೆ ತಿದ್ದುಪಡಿ ಮಾಡಿದ ಸಿಎಂ

    ಬೆಂಗಳೂರು: ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂ. ಸಹಾಯಧನ ನೀಡಲು ತಿರ್ಮಾನಿಸಿರುವುದಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕಳೆದ ಫೆ.17ರಂದು ರಾಜ್ಯ ಬಜೆಟ್​ನಲ್ಲಿ ಮಹಿಳಾ ಕೃಷಿ ಕಾರ್ಮಿಕರಿಗೆ 500 ರೂ. ಘೋಷಣೆ ಮಾಡಿದ್ದರು. ಇದೀಗ ಮೊತ್ತವನ್ನು ಪರಿಷ್ಕರಿಸಿ ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ.

    ಸದನದಲ್ಲಿ ಮಾತನಾಡುತ್ತಾ, ಚುನಾವಣೆಯ ಒತ್ತಡಕ್ಕೆ ಮಣಿಯದೆ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡನೆ ಮಾಡಿದ್ದೇನೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನೀಡುವ ಪ್ರಯತ್ನ ನನ್ನದಾಗಿತ್ತು. ನಾವು ಸಂಪೂರ್ಣ ಭ್ರಷ್ಟಾಚಾರ ತೆಗೆದಿದ್ದೇವೆ ಎಂಬ ನೈತಿಕ ಶಕ್ತಿ ಇಲ್ಲ. ಆದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಮದ್ಯವರ್ತಿಗಳ ಕೈಬಿಸಿ ಮಾಡುವುದನ್ನು ತಪ್ಪಿಸಿದ್ದೇನೆ. ಇದಕ್ಕಾಗಿ ಇನ್ನಷ್ಟು ಗ್ರಾಮ ಒನ್ ಕೇಂದ್ರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇದನ್ನೂ ಓದಿ: ಮಂಗಳೂರು ಕಮಿಷನರ್ ಸೇರಿ 7 ಐಪಿಎಸ್​ ಅಧಿಕಾರಿಗಳ ವರ್ಗಾವಣೆ; ಯಾರು, ಎಲ್ಲಿಗೆ? ಇಲ್ಲಿದೆ ವಿವರ…

    ಮಕ್ಕಳ ಶಾಲೆ ಬಸ್ ಕೊರತೆ ಬಗ್ಗೆ ಮಾತನಾಡುತ್ತಾ, ಹೊಸದಾಗಿ ಒಂದು ಸಾವಿರ ಬಸ್ ಓಡಾಟ ನಡೆಸಲಿದ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಇದೀಗ ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ಮಾರ್ಪಾಡು ಮಾಡಲಾಗಿದ್ದು, ಒಟ್ಟು ಎರಡು ಸಾವಿರ ಬಸ್ ನೀಡಲಾಗುವುದು. ಮುಖ್ಯಮಂತ್ರಿ ಹಿತಾಸಕ್ತಿ ಯೋಜನೆ ಮೂಲಕ ವಿದ್ಯಾವಾಹಿನಿ ಹೆಸರಿನಲ್ಲಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಅನೇಕ ವಿದ್ಯಾರ್ಥಿಗಳಿಗೆ ಪಿಯುಸಿ, ಡಿಗ್ರಿ ಫೀಸ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡು ಹೈಸ್ಕೂಲ್ ವರೆಗಿದ್ದ ಉಚಿತ ಶಿಕ್ಷಣವನ್ನು ಪದವಿ ವರೆಗೆ ವಿಸ್ತರಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಕಾರ್ಯಕ್ರಮದಿಂದ ದೂರ ಉಳಿದ ಅನಂತ್ ನಾಗ್; ಕುತೂಹಲ ಕೆರಳಿಸಿದ ಮುಂದಿನ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts