More

    ಶೇ.100 ಫಲಿತಾಂಶ ತರಲು ಯತ್ನಿಸಿ- ಶಿಕ್ಷಕ ಸಮೂಹಕ್ಕೆ ಸಂಡೂರು ಶಾಸಕ ಈ.ತುಕಾರಾಮ್ ಸಲಹೆ

    ಸಂಡೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ಪ್ರೋತ್ಸಾಹ ನೀಡಿ, ಶೇ.100 ಫಲಿತಾಂಶ ತರಲು ಯತ್ನಿಸಬೇಕು ಎಂದು ಶಾಸಕ ಈ.ತುಕಾರಾಮ್ ಹೇಳಿದರು.

    ಪಟ್ಟಣದ ಎಪಿಎಂಸಿ ಪ್ರೌಢಶಾಲೆಯಲ್ಲಿ ಬಿಇಒ ಕಚೇರಿ, ಕುಮಾರಸ್ವಾಮಿ ಮೈನಿಂಗ್ ಕಂಪನಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶಕ್ಕಾಗಿ ಸಿದ್ಧಪಡಿಸಿದ ಪೂರಕ ಸಾಹಿತ್ಯ ಪುಸ್ತಕ ‘ಪರಿಹಾರ’ದ ಬಿಡುಗಡೆ, ಪ್ರೌಢಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನ ಸಭೆ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಹಂತದಲ್ಲಿದ್ದಾಗ, ಅಂಥವರನ್ನು ಪ್ರೇರೇಪಿಸಿ ಹೆಚ್ಚಿನ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು. ನಮ್ಮ ತಾಲೂಕಿಗೆ ಮಂಜೂರಾಗಿರುವ ಮಾದರಿ ಶಾಲೆಗಳ ಸಂಖ್ಯೆಗಳನ್ನು ಹೆಚ್ಚಿಸಿ ಪ್ರತಿ ಕ್ಲಸ್ಟರ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಸುಸಜ್ಜಿತ ಶಾಲೆಗಳನ್ನು ನಿರ್ಮಿಸುವ ಮೂಲಕ ನಮ್ಮ ತಾಲೂಕನ್ನು ಅತ್ಯಂತ ಮಹತ್ವದ ಶೈಕ್ಷಣಿಕ ಕೇಂದ್ರವನ್ನಾಗಿಸಲು ಎಲ್ಲರೂ ಯತ್ನಿಸಬೇಕು ಎಂದರು.

    ಬಿಇಒ ಮೈಲೇಶ್ ಬೇವೂರ್, ತಾಪಂ ಇಒ ಷಡಕ್ಷರಿ, ಬಳ್ಳಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಪುರಸಭೆ ಅಧ್ಯಕ್ಷೆ ಅನಿತಾ ವಸಂತ್‌ಕುಮಾರ್, ಡಯಟ್ನಾ ಪ್ರಾಚಾರ್ಯೆ ಹನುಮಕ್ಕ, ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಮಾತನಾಡಿದರು.

    ಪ್ರೌಢಶಾಲೆ ಸಹಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರು, ಪದೋನ್ನತಿ ಹೊಂದಿದ ಶಿಕ್ಷಕರು ಮತ್ತು ಜಿಲ್ಲಾ ಪ್ರಶಸ್ತಿಯನ್ನು ಪಡೆದ ಶಿಕ್ಷಕರನ್ನು ಗೌರವಿಸಲಾಯಿತು. ವಿಜಯಕುಮಾರ್ ಪ್ರಾರ್ಥಿಸಿದರು. ವೀರಣ್ಣ ತಂಡ ನಡೆಸಿದರೆ, ನಾಗರಾಜ್ ಹುಣಸೆಕಟ್ಟೆ ಸ್ವಾಗತಿಸಿದರು. ಅಮರೇಶ ಸೊನ್ನದ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts