More

    ರೆಸಾರ್ಟ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆ

    ಬೀಚ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆಫ್ರಾನ್ಸ್​ನ ಪ್ರಸಿದ್ಧ ನೇಚರಿಸ್ಟ್​ ಬೀಚ್​ ಕ್ಯಾಪ್​ ಡಿ ಆಗ್ಡೆ ಇದೀಗ ಕರೊನಾ ಹಾಟ್​ಸ್ಪಾಟ್​ ಆಗಿ ಬದಲಾಗಿದೆ. ಇಲ್ಲಿನ ರೆಸಾರ್ಟ್​ಗೆ ಭೇಟಿ ಕೊಟ್ಟಿದ್ದ 100ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಫ್ರೆಂಚ್​ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

    ಕ್ಯಾಪ್​ ಡಿ ಆಗ್ಡೆ ಒಂದು ಬೆತ್ತಲೆ ಕಡಲತೀರ. ಇಲ್ಲಿ ರೆಸಾರ್ಟ್ ಕೂಡ ಇದೆ. ಬೇಸಿಗೆಯಲ್ಲಿ ಇಲ್ಲಿಗೆ ಅನೇಕ ಪ್ರವಾಸಿಗರು ಭೇಟಿ ಕೊಡುತ್ತಾರೆ. ನಗ್ನವಾಗಿಯೇ ಇರುತ್ತಾರೆ. ಬೀಚ್​​ನಲ್ಲಿ ನಗ್ನವಾಗಿ ಆಟವಾಡುತ್ತಾರೆ. ರೆಸಾರ್ಟ್​ನಲ್ಲಿಯೂ ಬೆತ್ತಲೆ…ಶಾಪಿಂಗ್​ಗೂ ಬೆತ್ತಲೆಯಾಗಿಯೇ ಹೋಗುತ್ತಾರೆ. ಮೈಮೇಲೆ ಒಂದು ತುಂಡು ಬಟ್ಟೆಯೂ ಇರುವುದಿಲ್ಲ. ಇದನ್ನೂ ಓದಿ: ತಾನು ಪ್ರತಿದಿನ ಮಲಗುತ್ತಿದ್ದ ಬಸ್​ಸ್ಟಾಪ್​​ನಲ್ಲಿಯೇ ನೇಣು ಬಿಗಿದುಕೊಂಡ ಭಿಕ್ಷುಕ; ಜತೆಗಿದ್ದವ ಪೊಲೀಸರಿಗೆ ತಿಳಿಸಿದ್ದೇನು?

    ಬಾರಿ ಕರೊನಾ ಮಧ್ಯೆಯೂ ಹಲವರು ಬೀಚ್​ಗೆ ಭೇಟಿ ಕೊಟ್ಟಿದ್ದರು. ಮೈಮೇಲೆ ಬಟ್ಟೆ ಧರಿಸದಿದ್ದರೂ, ಮುಖಕ್ಕೆ ಮಾಸ್ಕ್ ಧರಿಸಿದ್ದರು. ಆದರೆ ರೆಸಾರ್ಟ್​ಗೆ ಬಂದು ಹೋದ 100ಕ್ಕೂ ಹೆಚ್ಚು ಜನರು ಈಗ ಕರೊನಾಕ್ಕೆ ತುತ್ತಾಗಿದ್ದಾರೆ. ಸುಮಾರು 50 ಮಂದಿಯ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ. ಹಾಗಾಗಿ ಆರೋಗ್ಯ ಇಲಾಖೆಯೂ ಆತಂಕ ವ್ಯಕ್ತಪಡಿದೆ.

    ಹಾಗೇ, ಮತ್ತೊಮ್ಮೆ ಆರೋಗ್ಯ ಇಲಾಖೆ ಕ್ಯಾಪ್​ ಡಿ ಆಗ್ಡೆ ಮ್ಯಾನೇಜರ್​ಗಳಿಗೆ, ಆಡಳಿತಕ್ಕೆ ಎಚ್ಚರಿಕೆ ನೀಡಿದೆ. ಕರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿದೆ. ಹಾಗೇ, ಪ್ರವಾಸಿಗರಿಗೂ ಖಡಕ್​ ವಾರ್ನ್​ ಮಾಡಿದೆ. ಸಾಮಾಜಿಕ ನಿಯಮ ಅಂತರ ಪಾಲನೆ ಮಾಡಿ, ಮಾಸ್ಕ್ ಧರಿಸಿ ಎಂದು ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಎರಡು ಸಲ ಮೃತಪಟ್ಟ 12 ವರ್ಷದ ಬಾಲಕಿ; ಶವಕ್ಕೆ ಸ್ನಾನ ಮಾಡಿಸುವಾಗ ಬೆಚ್ಚಿಬಿದ್ದ ಪಾಲಕರು

    ಈ ನಗ್ನ ರೆಸಾರ್ಟ್​ ಒಳಗೆ ಅಂಗಡಿಗಳು, ಬ್ಯಾಂಕ್​​ಗಲು, ರೆಸ್ಟೋರೆಂಟ್​, ಬಾರ್​, ಕ್ಲಬ್​ಗಳೆಲ್ಲ ಇವೆ. ಇಲ್ಲೆಲ್ಲ ಕಡೆಯಲ್ಲೂ ಪ್ರವಾಸಿಗರು ಮೈಮೇಲೆ ಬಟ್ಟೆಯಿಲ್ಲದೆ ಓಡಾಡುತ್ತಾರೆ. ಆದರೆ ಈ ಬಾರಿ ಮೂಗಿನ ಮೇಲೆ ಒಂದು ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಆದರೂ ಕರೊನಾ ವ್ಯಾಪಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ರೆಸಾರ್ಟ್​ ಮುಖ್ಯಸ್ಥರು ತಿಳಿಸಿದ್ದರು.

    ರೆಸಾರ್ಟ್​ಗೆ ಭೇಟಿ ನೀಡಿದವರ ತಪಾಸಣೆ ಮಾಡಲಾಗುತ್ತಿದ್ದು, ಸದ್ಯ 100 ಮಂದಿಯಲ್ಲಿ ಪಾಸಿಟಿವ್​ ಬಂದಿದೆ. ಆದರೆ ಇನ್ನೂ ಪರೀಕ್ಷೆ ನಡೆಯುತ್ತಿದ್ದು, ಮತ್ತಷ್ಟು ಜನರಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಮನೆಯೊಳಕ್ಕೆ ನುಗ್ಗಿದ ಹಾವನ್ನೇ ತಿಂದು ತೇಗಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts