More

    ಕೇಂದ್ರ ಬಜೆಟ್​ 2020: 2025ರೊಳಗೆ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚಲಿದೆ ತೇಜಸ್​ ಪ್ರವಾಸಿ ರೈಲು

    ನವದೆಹಲಿ: ಉಡಾನ್​ ಯೋಜನೆಯಡಿಯಲ್ಲಿ ದೇಶದಲ್ಲಿ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಯ ಸಮಯದಲ್ಲಿ ತಿಳಿಸಿದರು.

    ದೇಶದ ಪ್ರಮುಖ ನಗರಗಳಲ್ಲಿ ಒಟ್ಟು 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು. 2020-21ನೇ ವರ್ಷದಲ್ಲಿ ಒಟ್ಟು 1.7 ಲಕ್ಷ ಕೋಟಿ ಹಣವನ್ನು ಸಾರಿಗೆ ಮೂಲ ಸೌಕರ್ಯಕ್ಕಾಗಿ ನೀಡುವುದಾಗಿ ಸಚಿವೆ ತಿಳಿಸಿದ್ದಾರೆ. 1,150 ರೈಲುಗಳು ಖಾಸಗಿ ವಲಯದ ಸಹಾಯದಿಂದ ದೇಶದಲ್ಲಿ ಸಂಚಾರ ಮಾಡಲಿವೆ. ನಾಲ್ಕು ರೈಲ್ವೆ ನಿಲ್ದಾಣಗಳನ್ನು ಖಾಸಗಿ ವಲಯದ ಸಹಾಯದಿಂದ ಪುನರಾಭಿವೃದ್ಧಿ ಮಾಡಲಾಗುವುದು.

    ದೇಶದಲ್ಲಿ ತೇಜಸ್​ ರೀತಿಯ ಪ್ರವಾಸಿ ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿ ರೈಲುಗಳನ್ನು ಬಿಡಲಾಗುವುದು. ರೈಲ್ವೆ ಹಳಿಗಳಲ್ಲಿ ಸೋಲಾರ್​ ಅಳವಡಿಕೆ ಮಾಡುವ ಪ್ರಸ್ತಾಪವಿದ್ದು ಅದನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಸಚಿವೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts