More

    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ

    |ಕೀತಿರ್ನಾರಾಯಣ ಸಿ. ಬೆಂಗಳೂರು

    ಐಷಾರಾಮಿ ಕಾರುಗಳ ಅಕ್ರಮ ನೋಂದಣಿ ಮೂಲಕ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂ.ಗೂ ಅಧಿಕ ರಸ್ತೆ ತೆರಿಗೆ ವಂಚಿಸಿರುವ ವಂಚಕರ ಕಾರುಬಾರು ತನಿಖೆಯಲ್ಲಿ ದೃಢಪಟ್ಟಿದೆ. ಈ ವಾಹನಗಳೆಲ್ಲ ಮಾಜಿ ಸಚಿವರು, ಶಾಸಕರು, ಬಿಲ್ಡರ್​ಗಳು ಮತ್ತು ಉದ್ಯಮಿಗಳಿಗೆ ಸೇರಿದ್ದು, ಇವುಗಳನ್ನು ಜಪ್ತಿ ಮಾಡಿ ತೆರಿಗೆ ವಸೂಲಿ ಮಾಡುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆ 29 ಬ್ರೇಕ್​ ಇನ್​ಸ್ಪೆಕ್ಟರ್​ಗಳಿಗೆ ವಹಿಸಿದೆ.

    ಏನಿದೆ ವರದಿಯಲ್ಲಿ?: 20 ಲ ರೂ. ಗಿಂತ ಅಧಿಕ ಬೆಲೆಯ ಕಾರುಗಳ ನೋಂದಣಿ ಹಾಗೂ ತೆರಿಗೆ ಪಾವತಿ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ಸಾರಿಗೆ ಇಲಾಖೆಗೆ ಮಧ್ಯಂತರ ವರದಿ ಸಲ್ಲಿಸಿದೆ. ಅಕ್ರಮ ನೋಂದಣಿ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು, ತನಿಖೆಯಲ್ಲಿ ಸಾಕ್ಷಿ ಸಮೇತ ಸಾಬೀತಾಗಿದೆ. ಆದ್ದರಿಂದ ಇನ್ನಷ್ಟು ವಿಸತ ತನಿಖೆ ಅಗತ್ಯವಿದೆ ಎಂದು ವರದಿಯಲ್ಲಿ ಶಿಾರಸು ಮಾಡಲಾಗಿದೆ.

    ಅಕ್ರಮ ನೋಂದಣಿ: ಸದ್ಯ 278 ಐಷಾರಾಮಿ ಕಾರುಗಳನ್ನು ಟ್ಯಾಕ್ಸ್​ ಕಟ್ಟಿಸಿಕೊಳ್ಳದೆ ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ತೆರಿಗೆ ವಂಚಿಸಿರುವ 145 ವಾಹನ ಹಾಗೂ 133 ವಾಹನಗಳ ಎರಡು ಪಟ್ಟಿ ಸಿದ್ಧಪಡಿಸಿದೆ. ಯಾವ ವರ್ಷ ನೋಂದಣಿ ಆಗಿದೆ, ವಾಹನದ ನಂಬರ್​, ಯಾರ ಹೆಸರಲ್ಲಿ ಮಾಲೀಕತ್ವ ಇದೆ ಹಾಗೂ ಮನೆ ವಿಳಾಸ ನಮೂದು ಮಾಡಲಾಗಿದೆ. ಪಟ್ಟಿಯಲ್ಲಿರುವ ಕಾರುಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು ತೆರಿಗೆ ವಸೂಲಿ ಮಾಡಲು ರಾಜ್ಯದ ವಿವಿಧ ಆರ್​ಟಿಒ ಕಚೇರಿಗಳ 29 ಬ್ರೇಕ್​ ಇನ್​ಸ್ಪೆಕ್ಟರ್​ಗಳನ್ನು ನಿಯೋಜಿಸಿದ್ದು, ತಲಾ ಒಬ್ಬರಿಗೆ 7 ರಿಂದ 12 ವಾಹನಗಳಂತೆ ಹಂಚಿಕೆ ಮಾಡಲಾಗಿದೆ.

    ನಕಲಿ ಇನ್​ವಾಯ್ಸ್​: ರಸ್ತೆ ತೆರಿಗೆ ವಂಚನೆ ಜತೆಗೆ ನಕಲಿ ಇನ್​ವಾಯ್ಸ್​ಗಳನ್ನು ತಯಾರಿಸಿ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಅಕ್ರಮ ಎಸಗಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಎಸ್​ಟಿ ಗುಪ್ತಚರ ಅಧಿಕಾರಿಗಳಿಂದಲೂ ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿ, ಪತ್ರ ಬರೆಯಲು ನಿರ್ಧರಿಸಿದೆ. ಅಧಿಕಾರಿಗಳು ಹೇಳುವ ಪ್ರಕಾರ ಈವರೆಗಿನ ತನಿಖೆಯಲ್ಲಿ ಅಂದಾಜು 100 ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ ಕಂಡುಬಂದಿದೆ. ಒಂದು ವೇಳೆ ಜಿಎಸ್​ಟಿ ಅಧಿಕಾರಿಗಳಿಂದ ತನಿಖೆ ನಡೆದರೆ ಪತ್ತೆಯಾಗುವ ವಂಚನೆ ಮೊತ್ತದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.

    ಮಾಲೀಕರಿಗೆ ಸಂಕಷ್ಟ: ತೆರಿಗೆ ವಂಚನೆ ಪಟ್ಟಿಯಲ್ಲಿರುವ ಕಾರುಗಳೆಲ್ಲ ರಾಜಕಾರಣಿ ಗಳು, ಉದ್ಯಮಿಗಳು, ಬಿಲ್ಡರ್​ಗಳು ಹಾಗೂ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳ ಹೆಸರಿನಲ್ಲಿ ನೋಂದಣಿಯಾಗಿವೆ. ರಾಜಕಾರಣಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಲ್ಲಿ ವಾಹನಗಳನ್ನು ನೋಂದಣಿ ಮಾಡಿಸಿದ್ದಾರೆ. ತೆರಿಗೆ ಪಾವತಿಸಿರುವುದಕ್ಕೆ ಯಾವುದೇ ದಾಖಲಾತಿ ಇಲ್ಲ. ಹೀಗಾಗಿ ವಾಹನ ಕಳೆದುಕೊಳ್ಳುವ ಜತೆಗೆ ವಿಚಾರಣೆ ಎದುರಿಸುವ ಸಂಕಷ್ಟ ಎದುರಾಗಿದೆ.

    54 ಲಕ್ಷ ಡಿಸ್ಕೌಂಟ್​!
    83 ಲಕ್ಷ ರೂ. ಬೆಲೆಯ ಕಾರನ್ನು 29 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ಸಂದರ್ಭದಲ್ಲಿ 29 ಲಕ್ಷ ರೂ.ನ ಇನ್​ವಾಯ್ಸ್​ ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಮಾರಾಟ ಮಾಡಿರುವ ಕಾರಿನ ಅಸಲಿ ಶೋ ರೂಂ ಬೆಲೆ 83 ಲಕ್ಷ ರೂ. ಇದೆ. ಈ ಬಗ್ಗೆ ಪ್ರಶ್ನಿಸಿದಾಗ ಡಿಸ್ಕೌಂಟ್​ ಕೊಟ್ಟಿರುವುದಾಗಿ ಡೀಲರ್​ ಹೇಳಿಕೆ ಕೊಟ್ಟಿದ್ದಾರೆ. ಶೇ.2ರಿಂದ ಶೇ.5ರವರೆಗೆ ಡಿಸ್ಕೌಂಟ್​ ಕೊಟ್ಟರೆ ಹೆಚ್ಚು. ಆದರಿಲ್ಲಿ 54 ಲಕ್ಷ ರೂ. ಡಿಸ್ಕೌಂಟ್​ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ನಕಲಿ ಇನ್​ವಾಯ್ಸ್​ ಮೂಲಕ ಜಿಎಸ್​ಟಿ ವಂಚಿಸಿರುವ ಅನುಮಾನ ವ್ಯಕ್ತವಾಗಿದೆ.

    ಎಷ್ಟು ಕಟ್ಟಬೇಕು?: ಕರ್ನಾಟಕದಲ್ಲಿ ರಸ್ತೆ ತೆರಿಗೆ ಶೇ.20 ಇದೆ. ಅಂದರೆ 1 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದರೆ 20 ಲ ರೂ. ತೆರಿಗೆ ಪಾವತಿಸಬೇಕು. 50 ಲಕ್ಷ ಮೌಲ್ಯದ ಕಾರಿಗೆ 10 ಲಕ್ಷ ರೂ. ಪಾವತಿಸಬೇಕು. ಜಿಎಸ್​ಟಿ ಬೇರೆ ಸೇರಿಕೊಳ್ಳುತ್ತದೆ. 3 ರಿಂದ 5 ಕೋಟಿ ರೂ.ನ ಲ್ಯಾಂಬೋಗಿರ್ನಿ, 40 ಲಕ್ಷ ರೂ.ನಿಂದ 2 ಕೋಟಿ ರೂ. ಮೌಲ್ಯದ ಬಿಎಂಡಬ್ಲು, 2 ಕೋಟಿ ರೂ.ಗಿಂತ ಹೆಚ್ಚಿನ ಪೋರ್ಶೆ ಹೀಗೆ ದುಬಾರಿ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ಕಳ್ಳದಾರಿಯಲ್ಲಿ ನೋಂದಣಿ ಮಾಡಿಕೊಡಲಾಗುತ್ತದೆ. ಸರ್ಕಾರಕ್ಕೆ ಸೇರಬೇಕಾದ ತೆರಿಗೆ ವಂಚಿಸಿ ವೈಯಕ್ತಿಕ ಲಾಭ ಮಾಡಿಕೊಳ್ಳಲಾಗುತ್ತಿದೆ.

    ವಸೂಲಿಗೆ 7 ದಿನ ಗಡುವು: ಕೂಡಲೇ ವಾಹನಗಳನ್ನು ಜಪ್ತಿ ಮಾಡಬೇಕು. ಒಂದು ವೇಳೆ ತೆರಿಗೆ ಪಾವತಿಸಿರುವ ಸೂಕ್ತ ದಾಖಲೆ ಒದಗಿಸಿದರೆ, ಪರಿಗಣಿಸಿ ವಾಹನ ಬಿಡಬೇಕು. ತೆರಿಗೆ ಪಾವತಿಸದಿದ್ದರೆ ವಸೂಲಿ ಮಾಡಬೇಕು. ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ತೆರಿಗೆ ಪಾವತಿಸಿರುವುದಕ್ಕೆ ಪುರಾವೆ ಸಮೇತ ವಾಹನವಾರು ವರದಿ ಸಿದ್ಧಪಡಿಸಿ 7 ದಿನದಲ್ಲಿ ಸಾರಿಗೆ ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಅಪರ ಸಾರಿಗೆ ಆಯುಕ್ತರು ಆದೇಶಿಸಿದ್ದಾರೆ.


    ಫೈಲ್​ಗಳೇ ಮಾಯ
    ಪ್ರಸ್ತುತ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ 278 ವಾಹನಗಳ ಫೈಲ್​ಗಳೇ ಪತ್ತೆಯಾಗಿಲ್ಲ. ತೆರಿಗೆ ಪಾವತಿಸಿರುವ ಬಗ್ಗೆ ವಾಹನ್​ ಪೋರ್ಟಲ್​ನಲ್ಲೂ ಮಾಹಿತಿ ತೋರಿಸುತ್ತಿಲ್ಲ. 2003ರಿಂದಲೇ ಈ ದಂಧೆ ನಡೆದಿದೆ. ಆದರೆ, 2016ರ ನಂತರ ವಂಚನೆ ಪ್ರಕರಣಗಳು ಜಾಸ್ತಿಯಾಗಿರುವುದು ದೃಢಪಟ್ಟಿದೆ. ಒಟ್ಟಾರೆ 6000 ಫೈಲ್​ಗಳನ್ನು ಪರಿಶೀಲಿಸಲಾಗಿದೆ.

    ಯಾವೆಲ್ಲ ಕಾರುಗಳು?
    ಆಡಿ, ಜಾಗ್ವಾರ್​, ಮಸಿರ್ಡಿಸ್​ ಬೆಂಜ್​, ಬಿಎಂಡಬ್ಲ್ಯು, ಪೋರ್ಶೆ, ಲ್ಯಾಂಬೋಗಿರ್ನಿ, ವೋಲ್ವೋ, ರೇಂಜ್​ ರೋವರ್​, ಎಂಡೇವೋರ್​, ಫಾರ್ಚೂನರ್​, ಸ್ಕೋಡಾ ಇನ್ನಿತರ ದುಬಾರಿ ಬೆಲೆಯ ಕಾರುಗಳ ನೋಂದಣಿಗೆ ತೆರಿಗೆ ವಂಚಿಸಲಾಗಿದೆ. ಕಡಿಮೆ ಬೆಲೆಯ ಆಲ್ಟೋ ಕೆ-10, ಮಾರುತಿ ಸ್ವ್ಟಿ್​, ಜ್ಹೆನ್​, ಸ್ಯಾಂಟ್ರೋ ಮತ್ತು ಇನ್ನೋವಾ ಕಾರುಗಳ ನೋಂದಣಿಯಲ್ಲೂ ಕಳ್ಳಾಟ ನಡೆದಿದೆ.

    ಎಲ್ಲೆಲ್ಲಿ ಕಳ್ಳಾಟ?
    ಬೆಂಗಳೂರಿನ ಕೋರಮಂಗಲ (ಕೇಂದ್ರ) ಆರ್​ಟಿಒ, ಕಸ್ತೂರಿನಗರ (ಪೂರ್ವ) ಆರ್​ಟಿಒ, ಜಯನಗರ (ದಣ) ಆರ್​ಟಿಒಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಧುಗಿರಿ, ಶಿವಮೊಗ್ಗ, ತುಮಕೂರು, ದೇವನಹಳ್ಳಿ, ಕೆಜಿಎಫ್‌​, ಕೋಲಾರ ಸೇರಿ ರಾಜ್ಯದ 19 ಕಚೇರಿಗಳಲ್ಲಿ ವಂಚನೆ ಬೆಳಕಿಗೆ ಬಂದಿವೆ. ಬೆಂಗಳೂರಲ್ಲಿ ಅತಿ ಹೆಚ್ಚು ಕೇಸ್​ ವರದಿಯಾಗಿದ್ದು, ಉಳಿದೆಡೆ ಒಂದು ಅಥವಾ ಎರಡು ಪ್ರಕರಣ ಪತ್ತೆಯಾಗಿವೆ.

    ಕ್ಯಾಶ್​ ಕೊಟ್ಟು ಕೆಟ್ಟರೇ?
    ನೋಂದಣಿ ಸಂದರ್ಭದಲ್ಲಿ ಕೆಲವರು ಆದಾಯ ತೆರಿಗೆ ವಂಚಿಸುವ ಉದ್ದೇಶದಿಂದ ಶೋರೂಂ ಡೀಲರ್​ಗಳಿಗೆ ಬ್ಲ್ಯಾಕ್‌ಮನಿಯನ್ನು ನಗದು ರೂಪದಲ್ಲಿ ಕೊಟ್ಟಿದ್ದಾರೆ. ಆದರೆ, ಶೋರೂಂನವರು ವಾಹನದ ರಸ್ತೆ ತೆರಿಗೆ ಪಾವತಿಸಿಲ್ಲ. ಈಗ ಆರ್​ಟಿಒ ಕಚೇರಿಗೆ ಬರುತ್ತಿರುವ ಮಾಲೀಕರು, ತೆರಿಗೆ ಪಾವತಿಸಲು ನೋಂದಣಿ ಸಂದರ್ಭದಲ್ಲೇ ಶೋರೂಂ ನವರಿಗೆ ಹಣ ಕೊಟ್ಟಿರುವುದಾಗಿ ಹೇಳುತ್ತಿ ದ್ದಾರೆ. ಆದರೆ, ಆರ್​ಟಿಜಿಎಸ್​ ಅಥವಾ ಡಿಡಿ ರೂಪದಲ್ಲಿ ಕಟ್ಟಿದ್ದರಷ್ಟೇ ಅಧಿಕಾರಿಗಳು ಪರಿಗಣಿಸುತ್ತಾರೆ.

    ಸಾರಿಗೆ ಇಲಾಖೆ ಸಿದ್ಧಪಡಿಸಿರುವ ತೆರಿಗೆ ಪಾವತಿಸದ 278 ಕಾರುಗಳ ಪಟ್ಟಿ “ವಿಜಯವಾಣಿ’ಗೆ ಲಭ್ಯವಾಗಿದ್ದು, ಅವುಗಳ ವಾಹನ ನಂಬರ್​, ಮಾಲೀಕರ ಹೆಸರು ಹಾಗೂ ವಿಳಾಸದ ಮಾಹಿತಿ ಇಲ್ಲಿವೆ ನೋಡಿ:

    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ

    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ 100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ

    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ
    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ
    100 ಕೋಟಿ ರೂ. ತೆರಿಗೆ ಟೋಪಿ: ಐಷಾರಾಮಿ ಕಾರುಗಳಿಗೆ ರೋಡ್​ ಟ್ಯಾಕ್ಸ್​ ಕಟ್ಟದೆ ಬೊಕ್ಕಸಕ್ಕೆ ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts