More

    100 ದಿನದ ಸಾಧನೆ ಛಾಯಾಚಿತ್ರ ಪ್ರದರ್ಶನ

    ಹಾನಗಲ್ಲ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿರುವ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ನೂರು ದಿನಗಳ ಸಾಧನೆ ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನವನ್ನು ಪಟ್ಟಣದ ಬಸ್ ನಿಲ್ದಾಣದಲ್ಲಿ ಶಾಸಕ ಸಿ.ಎಂ.ಉದಾಸಿ ಶನಿವಾರ ಉದ್ಘಾಟಿಸಿದರು.

    100 ದಿನಗಳ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್​ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ನೆರೆ ಹಾವಳಿ ಸಂದರ್ಭದಲ್ಲಿ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸಿದ ರೀತಿ, ನೀಡಿದ ನೆರವುಗಳ ಕುರಿತಂತೆ ಬಿಂಬಿತವಾದ ಛಾಯಾಚಿತ್ರಗಳು ಹಾಗೂ ಮಾಹಿತಿಯನ್ನು ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಲಾಗುತ್ತಿದೆ ಎಂದರು.

    ‘ದಿನ ನೂರಾದರು ಸಾಧನೆ ನೂರಾರು’ ಎಂಬಂತೆ ಸರ್ಕಾರ ಘೊಷಿಸಿರುವ ನೇಕಾರರ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ, ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ, ಸಹಜ ಕೃಷಿ, ಮಾಹಿತಿ ತಂತ್ರಜ್ಞಾನ, ಬೆಂಗಳೂರು ಸಬರ್ಬನ್ ಯೋಜನೆ, ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಪ್ರತಿಫಲ ಸೇರಿ ಹಲವು ಮಾಹಿತಿಗಳು ಜನರಿಗೆ ಒಂದೇ ಸೂರಿನಡಿ ವಾರ್ತಾ ಇಲಾಖೆಯಿಂದ ಪ್ರದರ್ಶಿತವಾಗಿವೆ. ಮಾಹಿತಿ ಮಳಿಗೆಯಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ನಡಿಗೆಯ ಸಮಗ್ರ ಚಿತ್ರಣ ಕಾಣಬಹುದಾಗಿದೆ. ಪ್ರದರ್ಶನ ಫೆ. 17ರ ಸಂಜೆಯವರೆಗೆ ಮುಂದುವರಿಯಲಿದೆ.

    ತಾಲೂಕು ಹಂತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಮುಗಿಬಿದ್ದು ಸೆಲ್ಪಿ ಫೋಟೋ ತೆಗೆದುಕೊಳ್ಳುತ್ತಿದ್ದು ಎಲ್ಲರ ಗಮನ ಸೆಳೆಯಿತು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ವಾಯವ್ಯ ಸಾರಿಗೆ ಸಂಸ್ಥೆಯ ಹಾನಗಲ್ಲ ಘಟಕದ ನಿಯಂತ್ರಣಾಧಿಕಾರಿ ಅರ್ಕಾಚಾರಿ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ತಾಲೂಕು ಪಂಚಾಯಿತಿ ಇಒ ಚನ್ನಪ್ಪ ರಾಯಣ್ಣನವರ, ಪಿಎಸ್​ಐ ಬಿ.ಎನ್. ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts