More

    10 ಸಾವಿರ ಮಾಸ್ಕ್ ವಿತರಣೆ

    ರೋಣ: ಕರೊನಾ ವೈರಸ್ ವಿರುದ್ಧ ಹೋರಾಡಲು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಪಣ ತೊಟ್ಟಿದ್ದಾರೆ. ತಾವೇ ಸ್ವಂತ ಖರ್ಚಿನಲ್ಲಿ 10 ಸಾವಿರ ಮಾಸ್ಕ್ ಸಿದ್ಧಪಡಿಸಿ ತಮ್ಮ ತಮ್ಮ ಅಂಗನವಾಡಿ ವ್ಯಾಪ್ತಿಯಲ್ಲಿ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಇದರೊಂದಿಗೆ ಆಗಾಗ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ತಮ್ಮ ದಿನದಿತ್ಯದ ಕೆಲಸದ ಜೊತೆಗೆ ಹೊಲಿಗೆ ವೃತ್ತಿಯ ಅನುಭವವಿದ್ದ ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಾಸ್ಕ್ ಸಿದ್ಧ್ದಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ನನ್ನ ಅಂಗನವಾಡಿ ವ್ಯಾಪ್ತಿಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಅವರ ಮನೆಯವರು ಸೇರಿ 100 ಜನರಿದ್ದಾರೆ. ಹೀಗಾಗಿ ನೂರು ಮಾಸ್ಕ್​ಗಳನ್ನು ತಯಾರಿಸಿ ಉಚಿತವಾಗಿ ನೀಡಿದ್ದೇನೆ. ಮಾಸ್ಕ್ ಸಿದ್ಧಪಡಿಸಲು ನಮಗೆ ಬಟ್ಟೆ ಹಾಗೂ ಇಲಾಸ್ಟಿಕ್ ಸಿಗುತ್ತಿಲ್ಲ. ಅವುಗಳನ್ನು ಯಾರಾದರೂ ದಾನಿಗಳು ಪೂರೈಕೆ ಮಾಡಿದರೆ ನಾವು ಹೆಚ್ಚಿನ ಪ್ರಮಾಣದಲ್ಲಿ ಉಚಿತವಾಗಿ ಗುಣಮಟ್ಟದ ಮಾಸ್ಕ್​ಗಳನ್ನು ತಯಾರಿಸಿ ಕೊಡುತ್ತೇವೆ.

    | ದಾಕ್ಷಾಯಿಣಿ ಗುಂಡೆ,

    ಅಂಗನವಾಡಿ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts