1ರಿಂದ 5ನೇ ಇಯತ್ತೆ ಭೌತಿಕ ತರಗತಿ ಜತೆಗೆ ಬಿಸಿಯೂಟ ಕೂಡ ಆರಂಭಿಸಲು ಇಲಾಖೆ ಚಿಂತನೆ; ಕ್ಲಾಸ್ ಯಾವತ್ತಿಂದ ಗೊತ್ತಾ?

2 Min Read
1ರಿಂದ 5ನೇ ಇಯತ್ತೆ ಭೌತಿಕ ತರಗತಿ ಜತೆಗೆ ಬಿಸಿಯೂಟ ಕೂಡ ಆರಂಭಿಸಲು ಇಲಾಖೆ ಚಿಂತನೆ; ಕ್ಲಾಸ್ ಯಾವತ್ತಿಂದ ಗೊತ್ತಾ?

ಬೆಂಗಳೂರು: ಒಂದರಿಂದ ಐದನೇ ಇಯತ್ತೆ ಭೌತಿಕ ತರಗತಿ ಜತೆಗೆ ಬಿಸಿಯೂಟವನ್ನು ಕೂಡ ಆರಂಭಿಸಲು ಸರ್ಕಾರ ಆಲೋಚಿಸಿದೆ. ಸದ್ಯ ಶಿಕ್ಷಣ ಇಲಾಖೆಯು ಆ.23ರಂದು 6ರಿಂದ 12ನೇ ಹಾಗೂ ಸೆ.6ರಂದು 6-8ನೇ ಇಯತ್ತೆಯ ಭೌತಿಕ ತರಗತಿ ಆರಂಭಿಸಿದೆ. ಒಟ್ಟಾರೆ ಶಾಲೆಗೆ ಹಾಜರಾಗುತ್ತಿರುವ ಪ್ರಮಾಣ ಸರಾಸರಿ ಶೇ.60 ಇದೆ.

ಇನ್ನೂ ಮುಂದುವರಿದು ಯೋಚನೆ ಮಾಡಿರುವ ಶಿಕ್ಷಣ ಇಲಾಖೆ, ದಸರಾ ರಜೆ ನಂತರ 1ರಿಂದ 5ನೇ ಇಯತ್ತೆ ಭೌತಿಕ ತರಗತಿಯ ಜತೆಜತೆಗೆ ಮಧ್ಯಾಹ್ನದ ಬಿಸಿಯೂಟ ಸಹ ಪ್ರಾರಂಭಿಸುವುದು ಉತ್ತಮ ಎಂಬ ಅಭಿಪ್ರಾಯ ತಳೆದಿದೆ.

ಮಕ್ಕಳಿಗೆ ಪೌಷ್ಠಿಕಾಂಶ ನೀಡುವುದಕ್ಕಾಗಿ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಸರ್ಕಾರ ನೀಡುತ್ತಾ ಬರುತ್ತಿದೆ. ಕರೊನಾ ಸೋಂಕಿನ ಪ್ರಕರಣ ಹೆಚ್ಚಾದ ಮೇಲೆ ಭೌತಿಕ ತರಗತಿಗಳು ಮುಚ್ಚಿದವು. ಈ ಹಿನ್ನೆಲೆಯಲ್ಲಿ ಬಿಸಿಯೂಟ ಬದಲಾಗಿ ಆಹಾರ ಧಾನ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ, ಇದು ಬಿಸಿಯೂಟದಷ್ಟು ಪರಿಣಾಮಕಾರಿಯಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಮರಳಿ ಬಿಸಿಯೂಟ ಆರಂಭಿಸುವಂತೆ ಶಿಕ್ಷಣ ತಜ್ಞರು, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಇನ್​ಸ್ಪೆಕ್ಟರ್ ಸೊಂಟಕ್ಕೇ ಕೈ ಹಾಕಿ ವಾಕಿಟಾಕಿ ಕದ್ದ ಖತರ್ನಾಕ್​ ಕಳ್ಳ..!

ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮರಳಿ ಬಿಸಿಯೂಟ ಯೋಜನೆ ಆರಂಭಿಸುವುದಕ್ಕೆ ಆಲೋಚನೆ ನಡೆಸಿದೆ. ಹೀಗಾಗಿ ಸದ್ಯದಲ್ಲೇ 1ರಿಂದ 5ನೇ ಇಯತ್ತೆಯ ಮಕ್ಕಳು ತರಗತಿಯಲ್ಲಿ ಬ್ಯುಸಿಯಾಗುವ ಜತೆಗೆ ಬಿಸಿಯೂಟವನ್ನೂ ಪಡೆಯಲಿದ್ದಾರೆ. 2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅ.10ರಿಂದ 20ರವರೆಗೆ ದಸರಾ ರಜೆ ಇದೆ. ಅ.21ರಿಂದ ಮರಳಿ ಶಾಲೆಗಳು ಆರಂಭವಾಗಲಿವೆ. ಈ ವೇಳೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಕೂಡ ಆರಂಭಿಸುವುದು ಸೂಕ್ತವಾಗಿದೆ ಎಂದು ಶಿಕ್ಷಣ ಇಲಾಖೆ ಲೆಕ್ಕಾಚಾರ ಹಾಕುತ್ತಿದೆ.

See also  ಎಲ್ಲ ಧರ್ಮದ ವಿದ್ಯಾರ್ಥಿಗಳೂ ಸಮವಸ್ತ್ರ ನಿಯಮ ಪಾಲಿಸಬೇಕು: ಅಮಿತ್​ ಷಾ

ಇದನ್ನೂ ಓದಿ: ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಧ್ಯಾಹ್ನ ಬಿಸಿಯೂಟ ಆರಂಭಿಸುವ ಅವಶ್ಯಕತೆಯನ್ನು ವಿವರಿಸಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಅಗತ್ಯ ಹೆಚ್ಚಾಗಿದೆ ಎಂದು ಮನವರಿಕೆ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಿಎಂ ಶೀಘ್ರದಲ್ಲೇ ಈ ಸಂಬಂಧ ಆದೇಶ ಹೊರಡಿಸಲು ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಜಯಂತಿ ದಿನವೇ ಗಾಂಧಿ-ಶಾಸ್ತ್ರಿ ಸೇರಿ ಹಲವು ಮಹನೀಯರಿಗೆ ಅಪಮಾನ; ತಹಶೀಲ್ದಾರ್​ ಕಚೇರಿ ಆವರಣದಲ್ಲೇ ದುಷ್ಕೃತ್ಯ!

ಈ ಯೋಜನೆ ಮರು ಆರಂಭಕ್ಕೆ ಹಾಲಿ ಶಿಕ್ಷಣ ಸಚಿವರಾಗಿರುವ ಬಿ.ಸಿ. ನಾಗೇಶ್ ಕೂಡ ಒಲವು ತೋರಿದ್ದಾರೆಂದು ತಿಳಿದು ಬಂದಿದ್ದು, ದಸರಾ ರಜೆ ಕಳೆದ ಬಳಿಕ ಶಿಕ್ಷಣ ಇಲಾಖೆಯು ಬಿಸಿಯೂಟ ಕಾರ್ಯಕ್ರಮ ಆರಂಭಿಸಲಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

ಪತ್ನಿ-ಮಕ್ಕಳೇ ಹಂತಕರು; ಮನೆಯಲ್ಲಿ ಕೊಂದು ಕಾಡಲ್ಲಿ ಶವ ಸುಟ್ಟರು!: ಬಯಲಾಯ್ತು ಅರಣ್ಯದಲ್ಲಿ ಪತ್ತೆಯಾದ ಸುಟ್ಟ ಕಾರಿನ ಪ್ರಕರಣ

Share This Article