More

    ಕೆಂಪುಕೋಟೆ ಗಲಭೆ ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ

    ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಲಭೆಯ ಮುಖ್ಯ ಆರೋಪಿಗಳಾಗಿರುವ ಪಂಜಾಬಿ ನಟ ದೀಪ್ ಸಿಧು ಮತ್ತು ಇತರ ಮೂವರ ಬಗ್ಗೆ ಸುಳಿವು ನೀಡುವವರಿಗೆ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ. ಜನವರಿ 26 ರ ಗಲಭೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈವರೆಗೆ 44 ಕೇಸುಗಳನ್ನು ದಾಖಲಿಸಿದ್ದು, 122 ಜನರನ್ನು ಬಂಧಿಸಿದ್ದಾರೆ.

    ದೆಹಲಿ ಪೊಲೀಸ್​ ಅಪರಾಧ ವಿಭಾಗವು ಜನವರಿ 26 ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 12 ಜನರ ಭಾವಚಿತ್ರಗಳನ್ನು ಬಿಡುಗಡೆ ಮಾಡಿ, ತೀವ್ರ ಹುಡುಕಾಟವನ್ನು ಆರಂಭಿಸಿದೆ. ಹಿಂಸಾಚಾರದ ಹಲವು ವೀಡಿಯೋಗಳನ್ನು ವೀಕ್ಷಿಸಿದ ನಂತರ ಮತ್ತು ಫೊರೆನ್ಸಿಕ್ ತಂಡದ ಸಹಾಯದೊಂದಿಗೆ ಈ 12 ಜನರ ಗುರುತನ್ನು ಹಿಡಿಯಲಾಗಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

    ದೀಪ್ ಸಿಧು ಜೊತೆ ಜುಗ್​ರಾಜ್ ಸಿಂಗ್ ಮತ್ತು ಇನ್ನಿಬ್ಬರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನಿಳಿಸಿ, ಧಾರ್ಮಿಕ ಬಾವುಟವೊಂದನ್ನು ಹಾರಿಸಿರುವ ಬಗ್ಗೆ ದಾಖಲಾಗಿರುವ ಕೇಸಿನಲ್ಲಿ ಮುಖ್ಯ ಆರೋಪಿಗಳಾಗಿದ್ದಾರೆ. ಈ ನಾಲ್ವರ ಬಂಧನಕ್ಕೆ ಸಹಕಾರಿಯಾಗುವ ಸುಳಿವನ್ನು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಅದೇ ಗಲಭೆ ಕೇಸಿನಲ್ಲಿ ಆರೋಪಿಗಳಾದ ಇತರ ನಾಲ್ಕು ಮಂದಿ – ಜಗ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಎಂಬುವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನು ನಿಗದಿಪಡಿಸಲಾಗಿದೆ.

    ಜನವರಿ 26 ರಂದು ಕೃಷಿ ಕಾಯ್ದೆಗಳ ವಿರುದ್ಧ ಯೋಜಿಸಲಾಗಿದ್ದ ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಪ್ರತಿಭಟನಾಕಾರರು ಒಪ್ಪಿಕೊಂಡಿದ್ದ ರೂಟ್ ಬದಲಾಯಿಸಿ, ದೆಹಲಿ ನಗರದೊಳಕ್ಕೆ ನುಗ್ಗಿದರು. ಹಿಂಸಾಚಾರಕ್ಕೆ ತೊಡಗಿ ಪೊಲೀಸರ ಮೇಲೆ ಆಕ್ರಮಣ ನಡೆಸಿದಾಗ ರಾಷ್ಟ್ರರಾಜಧಾನಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಗಳಲ್ಲಿ ಮುಖ್ಯ ಆರೋಪಿಯಾಗಿರುವ ದೀಪ್ ಸಿಧು ರೈತ ಚಳುವಳಿಯನ್ನು ದಿಕ್ಕು ತಪ್ಪಿಸುವ ಸಂಚು ನಡೆಸಿದ್ದ ಎಂದೂ ಕೆಲವು ರೈತನಾಯಕರು ಆರೋಪಿಸಿದ್ದಾರೆ.(ಏಜೆನ್ಸೀಸ್)

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಸಿಬಿಐ ನಿರ್ದೇಶಕರ ಅವಧಿ ಮುಗಿಯಿತು; ಉಸ್ತುವಾರಿಗೆ ಪ್ರವೀಣ್ ಸಿನ್ಹಾ

    ವಿಶ್ವದ ಮೊದಲ ಹೈಬ್ರಿಡ್‌ ಏರ್‌ ಷೋ ಶುರು: ಲೋಹದ ಹಕ್ಕಿಗಳ ಮೈನವಿರೇಳಿಸುವ ವಿಡಿಯೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts