More

    ಪತ್ರಕರ್ತರು, ವಿತರಕರು, ಏಜೆಂಟರಿಗೆ 1 ಕೋಟಿ ರೂ. ಕರೊನಾ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಪಿಐಎಲ್

    ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು ಹಾಗೂ ಏಜೆಂಟರು ಕರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

    ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಸುನೀಲ್ಕುಮಾರ್ ವಾದ ಮಂಡಿಸಿ, ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ಸುದ್ದಿವಾಹಿನಿ ಹಾಗೂ ಪತ್ರಿಕೆಗಳ ಪ್ರತಿನಿಧಿಗಳು ಸೋಂಕಿತ ಪ್ರದೇಶ, ಆಸ್ಪತ್ರೆ, ಸೋಂಕಿತರ ಕುಟುಂಬಗಳ ಸದಸ್ಯರ ಬಳಿ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇವರೂ ಕರೊನಾ ವಾರಿಯರ್ಸ್ ಆಗಿದ್ದು, ಯಾರಾದರೂ ಸೋಂಕಿನಿಂದ ಸಾವಿಗೀಡಾದರೆ ಮೃತರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷ ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ಕೋರಿದರು.

    ಇದನ್ನೂ ಓದಿ ಮದ್ಯ ಮಾರಲು ಬಾರ್-ಕ್ಲಬ್‌ಗಳಿಗೂ ಗ್ರೀನ್ ಸಿಗ್ನಲ್; ಆದರೆ ಪಾರ್ಸೆಲ್ ಒಯ್ಯುವುದಕ್ಕೆ ಮಾತ್ರ ಅವಕಾಶ

    ಲಾಕ್‌ಡೌನ್‌ನಿಂದಾಗಿ ಮಾಧ್ಯಮ ಸಂಸ್ಥೆಗಳೂ ಆರ್ಥಿಕ ನಷ್ಟ ಅನುಭವಿಸಿವೆ. ನಷ್ಟ ಸರಿದೂಗಿಸಲು ಸಂಸ್ಥೆಗಳು ತಮ್ಮ ನೌಕರರ ವೇತನ ಕಡಿತಗೊಳಿಸಿವೆ. ಅನೇಕ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆದುಹಾಕಿವೆ. ಇದರಿಂದ ಮಾಧ್ಯಮ ಪ್ರತಿನಿಧಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ವೇತನ ಕಡಿತಗೊಳಿಸದಂತೆ, ಕೆಲಸದಿಂದ ತೆಗೆಯದಂತೆ ಮತ್ತು ಕರೊನಾ ಹಾವಳಿ ನಿಲ್ಲುವವರೆಗೂ ಪತ್ರಕರ್ತರು ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಆಯಾ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

    ಸಂಕೇಶ್ವರರ ಸ್ವಾಗತ:  ಕರೊನಾ ಸಂಕಷ್ಟ ಸಂದರ್ಭದಲ್ಲಿ ಆರೋಗ್ಯ ಪಣಕ್ಕಿಟ್ಟು ದುಡಿಯುತ್ತಿರುವ ಮಾಧ್ಯಮ ಕ್ಷೇತ್ರದ ಸಿಬ್ಬಂದಿಗೆ ಪರಿಹಾರ ಘೋಷಿಸಬೇಕೆಂಬ ಪಿಐಎಲ್ ಸ್ವಾಗತಾರ್ಹ. ಕರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಮತ್ತಿತರ ಕ್ಷೇತ್ರಗಳ ಸಿಬ್ಬಂದಿಯಂತೆ ಪತ್ರಕರ್ತರೂ ದುಡಿಯುತ್ತಿದ್ದಾರೆ. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅಗತ್ಯವಾಗಿದೆ. ವಿಆರ್‌ಎಲ್ ಮೀಡಿಯಾ ಸಂಸ್ಥೆ ಈ ವಿಚಾರದಲ್ಲಿ ಬದ್ಧತೆ ಹೊಂದಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್ ಡಾ. ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹೇಳಿದ್ದಾರೆ.

    ತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts