More

    1.87 ಕೋಟಿ ರೂ. ನಗದು ವಶ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಅಂಗವಾಗಿ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ನೀತಿಸಂಹಿತೆ ಜಾರಿ ಬಳಿಕ ಈವರೆಗೂ 1.87 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಬಕಾರಿ 131, ಪೊಲೀಸ್ ಇಲಾಖೆಯಿಂದ 47 ಸೇರಿ ಒಟ್ಟು 178 ಉಲ್ಲಂಘನೆ ಪ್ರಕರಣ ದಾಖಲಾಗಿವೆ ಎಂದರು.

    ಜಿಲ್ಲಾದ್ಯಂತ 36 ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. 108 ಸೀರೆ ವಶ, ಅಬಕಾರಿ ಇಲಾಖೆಯಿಂದ 22,241 ಲೀಟರ್, ಪೊಲೀಸ್ ಇಲಾಖೆಯಿಂದ 265.490 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಮಾ. 28ರಿಂದ ನಾಮಪತ್ರ ಸ್ವೀಕಾರ ಕಾರ್ಯ ನಡೆಯಲಿದೆ. ಇದಕ್ಕೆ ಪೂರಕವಾದ ಅರ್ಜಿ ನಮೂನೆ ಕಚೇರಿಯಲ್ಲಿ ಲಭ್ಯವಿದ್ದು, ಅಗತ್ಯವಿರುವವರು ಕಚೇರಿಯ ಅವಧಿಯಲ್ಲಿ ಪಡೆಯಬಹುದು ಎಂದರು.

    ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಯೋಗವು ಸಾಮಾನ್ಯ, ವೆಚ್ಚ, ಪೊಲೀಸ್ ವೀಕ್ಷಕರನ್ನು ನೇಮಿಸಿದೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನದೊಳಗೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

    ಜಿಲ್ಲೆಯ ಎಲ್ಲ ಮತದಾರರಿಗೂ ವೈಯಕ್ತಿಕ ಪತ್ರದ ಮೂಲಕ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಮನವಿ ಮಾಡಲಾಗುವುದು. ಪ್ರಜಾಪ್ರಭುತ್ವ ಬಲವರ್ಧನೆಗೆ ಸಂವಿಧಾನ ನೀಡಿರುವ ಅವಕಾಶ ಅರ್ಹರೆಲ್ಲರೂ ತಪ್ಪದೇ ಬಳಸಿಕೊಳ್ಳಿ ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts