More

    1.10 ಕೋಟಿ ರೂ.ಮೌಲ್ಯದ ವಸ್ತು ಜಪ್ತಿ

    ಬೆಳಗಾವಿ ಜಿಲ್ಲೆಯಲ್ಲಿ 794 ಕಡೆ ಅಬಕಾರಿ ಇಲಾಖೆ ದಾಳಿ ಕಳ್ಳಬಟ್ಟಿ ಮಾರಾಟ ಪ್ರಕರಣ ಹೆಚ್ಚಳ

    ಬೆಳಗಾವಿ: ಕರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದ್ದರೂ ಅಕ್ರಮ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿ ಮಾರಾಟ ಪ್ರಕರಣಗಳು ಹೆಚ್ಚುತ್ತಲೇ ಇವೆ.
    ಮಾರ್ಚ್ 24ರಿಂದ ಈವರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ 794 ಕಡೆಗಳಲ್ಲಿ ದಾಳಿ ನಡೆಸಿ, 108 ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದರಲ್ಲಿ 64 ಜನರನ್ನು ಬಂಧಿಸಲಾಗಿದೆ. ಒಟ್ಟು 46,62,695 ಲೀಟರ್ ಮದ್ಯ, 95.900 ಲೀಟರ್ ಗೋವಾ ಮದ್ಯ, 10.170 ಲೀ. ಮಹಾರಾಷ್ಟ್ರ ಮದ್ಯ, 1207.200 ಲೀ. ಬೀಯರ್, 53 ಲೀ. ಸೇಂಧಿ, 170 ಲೀ. ಬೆಲ್ಲದ ಕೊಳೆ, 79.610 ಲೀ. ಸಂತ್ರಾ, 93 ಲೀ. ಕಾಜು, 1,714.400 ಲೀ. ಕಳ್ಳಬಟ್ಟಿ ಸಾರಾಯಿ, 50 ಕೆ.ಜಿ. ಬೆಲ್ಲ ಹಾಗೂ 7.400 ಲೀ. ವೈನ್ ಸೇರಿ 58 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 79 ದ್ವಿಚಕ್ರ ವಾಹನ, 2 ಆಟೋ ರಿಕ್ಷಾ, 2 ಕಾರ್, 4 ಗೂಡ್ಸ್ ವಾಹನ, 1 ಮಹೇಂದ್ರ ಪಿಕಪ್ ಸೇರಿ 52 ಲಕ್ಷ ರೂ. ಮೌಲ್ಯದ ಸುಮಾರು 88 ವಾಹನಗಳನ್ನು ಜಪ್ತಿ ಮಾಡಲಾಗಿದೆ.

    ಒಟ್ಟಾರೆ ವಶಪಡಿಸಿಕೊಂಡಿರುವ ಮದ್ಯ ಹಾಗೂ ವಾಹನಗಳ ಮೌಲ್ಯ 1.10 ಕೋಟಿ ರೂ. ಆಗಿದೆ. ಜಿಲ್ಲಾದ್ಯಂತ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇದೆ. ಹಾಗಾಗಿ ಅಕ್ರಮ ಚಟುವಟಿಕೆಗಳು ತಡೆಯುವ ನಿಟ್ಟಿನಲ್ಲಿ ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಅಕ್ರಮ ಮದ್ಯ ಸಾಗಣೆ ಹಾಗೂ ಸಾರಾಯಿ ತಯಾರಿಕಾ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸುತ್ತಿದೆ. ಹಗಲಿರುಳು ಗಸ್ತು ತಿರುಗಿ ವಾಹನಗಳನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts