More

    ೨೦೨೫ಕ್ಕೆ ರೈತರಿಗೆ ದಿನದ ೭ ಗಂಟೆ ತ್ರಿಪೇಸ್ ವಿದ್ಯುತ್

    ಬಾಗಲಕೋಟೆ: ಮೂಲ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಇಂದು ಎಲ್ಲ ಕ್ಷೇತ್ರದಲ್ಲಿ ಅವಶ್ಯಕ ಸಾಧನಾಗಿದ್ದು, ಮುಂಬರುವ ೨೦೨೫ಕ್ಕೆ ರೈತರಿಗೆ ಹಗಲಿನಲ್ಲಿ ೭ ಗಂಟೆಗಳ ಕಾಲ ತ್ರೀಪೇಸ್ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ ಎಂದು ಬಾಗಲಕೋಟೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ ಹೇಳಿದರು.
    ಗದ್ದನಕೇರಿಯ ಹೆಸ್ಕಾಂ ಶಾಖೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು ಹಾಗೂ ಉಳಿತಾಯ ಕ್ರಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಂದು ಮೊಬೈಲ್ ದಿಂದ ದೊಡ್ಡ ದೊಡ್ಡ ಕಾರ್ಖಾನೆವರೆಗೆ ವಿದ್ಯುತ್ ಅವಶ್ಯಕತೆಯಿದ್ದು, ಗ್ರಾಹಕರ ಸೇವೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸದಾಸಿದ್ದವಿದೆ. ಸರ್ಕಾರದ ನಿಯಮಾವಳಿ ಅನ್ವಯ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದರು.
    ಪ್ರತಿಯೊಬ್ಬ ಗ್ರಾಹಕರಿಗೆ ವಿದ್ಯುತ್ ಪೂರೈಸುವುದು ನಮ್ಮ ಕರ್ತವ್ಯವಾಗಿದೆ. ಸರಿಯಾಗಿ ಬಿಲ್ ಪಾವತಿಸುವುದು ಕೂಡಾ ಗ್ರಾಹಕರ ಜವಾಬ್ದಾರಿಯಾಗಿದೆ. ಬಾಗಲಕೋಟೆ ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳು ಒಂದು ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಪೂರೈಸುವುದು ಕಷ್ಟವಾಗುತ್ತಿದ್ದು, ಸರ್ಕಾರ ವಿದ್ಯುತ್ ಬಿಲ್‌ಗಾಗಿ ಹಣ ಮಂಜೂರು ಮಾಡಿದ್ದು, ಅದನ್ನು ಪಂಚಾಯಿತಿಯವರು ಬೇರೆ ಕರ್ತವ್ಯಕ್ಕೆ ವಿನಿಯೋಗಿಸಿದ್ದರಿಂದ ಹೀಗಾಗಿದೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ೮.೧೦ ರೂ.ಗಳಿಗೆ ೧ ಯುನಿಟ್‌ದಂತೆ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಅದರಲ್ಲಿ ಟ್ರಾನ್ಸಪಾರಮ್ ರಿಪೇರಿ, ಸಿಬ್ಬಂದಿ ವೇತನ ಸೇರಿದಂತೆ ಅನೇಕ ಖರ್ಚು ವೆಚ್ಚವಾಗಲಿದೆ. ನೀರು ಮತ್ತು ವಿದ್ಯುತ್ ದೇಶದ ಅಮೂಲ್ಯ ಆಸ್ತಿಯಾಗಿದ್ದು, ಮಿತವಾಗಿ ಬಳಸಿಕೊಳ್ಳುವುದರ ಜೊತೆಗೆ ವಿದ್ಯುತ್ ಹಾಗೂ ನೀರು ಉಳಿಸಿದಂತಾಗುವುದು ಎಂದರು.
    ಹೆಸ್ಕಾಂ ಖರೀದಿಸುವ ವಿದ್ಯುತ್ ಬಿಲ್ಲಿನಲ್ಲಿ ಶೇ.೭೫ ರಷ್ಟು ರೈತರಿಗಾಗಿಯೇ ಮೀಸಲಿರಿಸಿದ್ದು, ಇನ್ನುಳಿದದನ್ನು ಇತರೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನದಿ ತೀರದ ರೈತರ ಜಮೀನುಗಳಿಗೆ ಸೋಲಾರ್ ವಿದ್ಯುತ್ ಬಳಸಿ ಪಂಪ್‌ಸೆಟ್ ಚಲಾವಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ರೈತರು ತಮ್ಮ ಟ್ರಾನ್ಸಪಾರಮ್ ಸುಟ್ಟಾಗ ಯಾರಿಗೂ ಹಣ ನೀಡದೇ ಶಾಖಾಽಕಾರಿಗಳನ್ನು ಸಂಪರ್ಕಿಸಿದರೆ ಉಚಿತವಾಗಿ ಮತ್ತು ಕಂಪನಿಯ ವಾಹನದಲ್ಲಿಯೇ ಟ್ರಾನ್ಸಪಾರಂ ತಂದು ಮರು ಜೋಡಿಸಲಾಗುವುದು. ತಾಲೂಕಿನ ಗ್ರಾಹಕರು ಬಾಗಲಕೋಟೆ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧವಿದ್ದು, ಬಾಗಲಕೋಟೆ ಹೆಸ್ಕಾಂ ಕೂಡಾ ಎಲ್ಲ ಗ್ರಾಹಕರ ರೈತರ ಕಾರ್ಯಕ್ಕೆ ಕೈ ಜೋಡಿಸುತ್ತದೆ ಎಂದು ಹೇಳಿದರು.
    ಹೆಸ್ಕಾಂನ ಎ.ಎ.ಒ ಸುಪ್ರೀತ್ ಪಾಟೀಲ ವಿದ್ಯುತ್ ಬಳಕೆ ಅದರಿಂದಾಗುವ ಪ್ರಯೋಜನ ಮತ್ತು ತೊಂದರೆ ಕುರಿತಾಗಿ ಮಾತನಾಡಿದರು. ಎಇ ಡಿ.ಮಹಾಂತೇಶ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಹಕರಿಗಾಗಿ, ರೈತರಿಗಾಗಿ ಕೊಡಮಾಡಿದ್ದ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಎ.ಇ ವಿನಾಯಕ ಕಂದಗಲ್ಲ, ಎಸ್.ಓ ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts