More

    ಹೋಮ, ಯಾಗಗಳಿಂದ ವಿಶ್ವಕ್ಕೆ ಬೆಳಕು

    ಚಿತ್ತಾಪುರ: ಗಣಪತಿ ಹೋಮ, ಧನ್ವಂತರಿ ಯಾಗ ಮಾಡುವುದರಿಂದ ವಿಶ್ವಕ್ಕೆ ಬೆಳಕು ಚೆಲ್ಲುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
    ಪಟ್ಟಣದ ಶಿವಶಂಕರ ಮಠದ ಅಕ್ಕಮಹಾದೇವಿ ಮಂದಿರದಲ್ಲಿ ಶನಿವಾರ ಶ್ರೀ ಋಗ್ವೇದ ವೈದಿಕ ಪುರೋಹಿತರ ಟ್ರಸ್ಟ್, ಶ್ರೀ ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಮಂಡಳಿ ವತಿಯಿಂದ ಆಶ್ವಯುಜ ಅಧಿಕ ಮಾಸ ಹಾಗೂ ಕರೊನಾ ನಿರ್ಮೂಲನೆ ಪ್ರಯುಕ್ತ 2ನೇ ದಿನದ ಸಾಮೂಹಿಕ ಗಣಪತಿ ಹೋಮ, ಶ್ರೀ ಗುರುಪಾದ ಪೂಜೆ, ಧನ್ವಂತರಿ ಯಾಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಲ ಸ್ನಾನ, ಪ್ರಥ್ವಿ ಸ್ನಾನ, ಅಗ್ನಿ ಸ್ನಾನಗಳಿಂದ ಶುದ್ಧ ಪರಿಸರ ನಿರ್ಮಾಣವಾಗಿ, ಜ್ಞಾನದ ಬೆಳಕು ಬಂದು ಕರೊನಾ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.
    ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ನ ಗೌರವಾಧ್ಯಕ್ಷ ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಅಧ್ಯಕ್ಷ ಶಿವುಕುಮಾರ ಹಿರೇಮಠ, ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಕರಬಸಯ್ಯ ಸ್ವಾಮಿ, ತೋಟಯ್ಯಸ್ವಾಮಿ, ಸೋಮನಾಥಯ್ಯಸ್ವಾಮಿ ವೈದಿಕ ವೃಂದದವರಿಂದ ಹೋಮ, ಹವನದ ವೇದ ಘೋಷ, ಮಂತ್ರ ಪಠಣ ಮಾಡಿದರು.
    ಮಾಲಗತ್ತಿಯ ಶ್ರೀ ಚನ್ನಬಸವ ಶರಣರು, ಪ್ರಮುಖರಾದ ನಾಗರೆಡ್ಡಿ ಪಾಟೀಲ್ ಕರದಾಳ, ನಾಗರಾಜ ಪರಾಂಡೆ, ಅಣ್ಣಾರಾಯ ಪಾಟೀಲ್ ಮುಡಬೂಳ, ಚಂದ್ರಶೇಖರ ತೆಂಗಳಿ, ಮಹಾದೇವಪ್ಪ ಪಾಲಪ್, ನಾಗರಾಜ ರೇಷ್ಮಿ, ಇದ್ದರು. ವೀರೇಶಸ್ವಾಮಿ ಮಲಕೂಡ ನಿರೂಪಣೆ ಮಾಡಿದರು. ಶಿವಶರಣಯ್ಯಸ್ವಾಮಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts