More

    ಹೊಸ ವಿಷಯ ಕಲಿಯಲು ಪ್ರಯತ್ನಿಸಿ – ನ್ಯಾಯಮೂರ್ತಿ ಸಚಿನ ಮಗದುಮ್ಮ

    ಚಿಕ್ಕೋಡಿ: ವಕೀಲ ವೃತ್ತಿಯಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಎಷ್ಟೇ ಬೆಳವಣಿಗೆ ಕಂಡರೂ ಸಹ ಹೊಸ ಹೊಸ ವಿಚಾರಗಳನ್ನು ಕಲಿಯಬೇಕು ಎನ್ನುವ ಮನೋಭಾವನೆ ಯುವ ವಕೀಲರಲ್ಲಿ ಬರಬೇಕು ಎಂದು ಬೆಂಗಳೂರು ಹೈಕೋರ್ಟ್​ ನ್ಯಾಯಾಧೀಶ ಸಚಿನ ಮಗದುಮ್ಮ ಸಲಹೆ ನೀಡಿದರು.

    ಪಟ್ಟಣದ ನ್ಯಾಯವಾದಿಗಳ ಸಂದಿಂದ ಶನಿವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುವ ವಕೀಲರು ಧಾರವಾಡ ಹಾಗೂ ಬೆಂಗಳೂರಿನ ಹೈ ಕೋರ್ಟ್​ಗಳಲ್ಲಿ ವೃತ್ತಿ ಆರಂಭಿಸಿದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದರು.

    ಕಠಿಣ ಪರಿಶ್ರಮದೊಂದಿಗೆ ಹಿರಿಯ ವಕೀಲರ ಸಹಕಾರ ಮತ್ತು ಮಾರ್ಗದರ್ಶನ ನೀಡಿದರೆ ಯುವ ವಕೀಲರು ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ. ಹಿರಿಯ ವಕೀಲರ ಸಹಕಾರದಿಂದಲೇ ನಾನು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

    ನಾನು ಚಿಕ್ಕೋಡಿ ನಗರದಲ್ಲಿ ಹುಟ್ಟಿ ಬೆಳೆದು ಇಲ್ಲಿನ ನ್ಯಾಯಾಲಯದಲ್ಲಿ ಎರಡು ವರ್ಷ ವಕೀಲ ವೃತ್ತಿ ಆರಂಭಿಸಿ ಈಗ ಹೈಕೋರ್ಟ್​ ನ್ಯಾಯಮೂರ್ತಿಯಾದರೂ ವೃತ್ತಿ ಆರಂಭಿಸಿದ ಅನುಭವ ಮರೆಯಲು ಸಾಧ್ಯವಿಲ್ಲ ಎಂದರು.

    ವಕೀಲರ ಸಂದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿದರು. ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಏಳನೇ ಜಿಲ್ಲಾ ಸತ್ರ
    ನ್ಯಾಯಾಧೀಶ ಎಸ್​.ಎಲ್​.ಚವ್ಹಾಣ, ನ್ಯಾ. ಟಿ.ಶ್ರೀಕಾಂತ, ಚಿದಾನಂದ ಬಡಿಗೇರ, ಅಶೋಕ ಆರ್​.ಎಚ್​., ನಾಗೇಶ ಪಾಟೀಲ, ಸರ್ಕಾರಿ ವಕೀಲ ಆರ್​.ಐ.ಖೋತ, ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ಎಲ್​.ವಿ.ಬೋರನ್ನವರ, ಉಪಾಧ್ಯಕ್ಷ ಬಿ.ಪಿ.ದೇಶಿಂಗೆ, ಬಿ.ಎನ್​.ಪಾಟೀಲ, ಬಿ.ಆರ್​.ಯಾದವ, ರವಿ ಹುದ್ದಾರ,
    ಎಸ್​.ಟಿ.ಮುನ್ನೋಳ್ಳಿ, ಪ್ರಕಾಶ ಅನ್ವೇಕರ, ಎಸ್​.ಪಿ.ಉತ್ತೂರೆ, ಆರ್​,ಎನ್​,ಬಾಕಳೆ, ಎಚ್​.ಎಸ್​.ನಸಲಾಪುರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts