More

    ಹೊಸ ಪ್ರಯೋಗಮತಿಗಳಾಗಲಿ ಶಿಕ್ಷಕರು,ರಾಮಮೂರ್ತಿ ಸಲಹೆ

    ದಾವಣಗೆರೆ: ಶಾಲಾ ತರಗತಿಗಳಲ್ಲಿ ಶಿಕ್ಷಕರು ಹೊಸತನ ಮತ್ತು ಪ್ರಯೋಗಗಳಿಗೆ ಒಗ್ಗಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ರಾಮಮೂರ್ತಿ ಸಲಹೆ ನೀಡಿದರು.

    ನಗರದ ಈಶ್ವರಷ್ಟು ಪ್ರೌಢಶಾಲೆಯಲ್ಲಿ ಶನಿವಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಬಿ.ಆರ್. ಶಾಂತಕುಮಾರಿ ಸ್ಮರಣಾರ್ಥ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಣದಲ್ಲಿ ಹೊಸ ವಿಧಾನಗಳನ್ನು ಅಳವಡಿಸುವಾಗ ಶಿಕ್ಷಕರು ಹಿಂಜರಿಯುವುದೇ ಹೆಚ್ಚು. ಈ ಪ್ರವೃತ್ತಿಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದರು.

    ಮಕ್ಕಳು ಪದಗಳನ್ನು ಸ್ಪಷ್ಟವಾಗಿ ಉಚ್ಚಾರಣೆ ಮಾಡಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಬೇರೆ ದೇಶಗಳ ಶಾಲೆಗಳಲ್ಲಿ ಇಂದಿಗೂ ಮಕ್ಕಳಿಗೆ ಬ ”ವದ್ಗೀತೆ ಹೇಳಿಕೊಡಲಾಗುತ್ತಿದೆ. ನಮ್ಮಲ್ಲಿ ಅಂತಹ ಪ್ರಯೋಗ ರೂಢಿಗೆ ನಾವು ಹಿಂಜರಿಯುತ್ತಿದ್ದೇವೆ. ಹೊಸತನ್ನು ಕಲಿಯುವಾಗ ಹಿಂದೇಟು ಹಾಕಬಾರದು ಎಂದು ತಿಳಿಸಿದರು.

    ಈಶ್ವರಷ್ಟು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್. ಸುಜಾತಾ ಕೃಷ್ಣ, ವನಿತಾ ಶಿಕ್ಷಕಿಯರ ವೇದಿಕೆ ಅಧ್ಯಕ್ಷೆ ಜಿ.ಎಸ್. ಶಶಿರೇಖಾ, ಕಾರ್ಯದರ್ಶಿ ಎಸ್.ಎಂ. ಮಲ್ಲಮ್ಮ ನಾಗರಾಜ್‌ , ಈಶ್ವರನ್ನು ಶಾಲೆ ಮುಖ್ಯ ಶಿಕ್ಷಕ ಕೆ.ಎಸ್‌. ಪ್ರಭುಕುಮಾರ್, ನೀಲಗುಂದ ಜಯಮ್ಮ, ಆರ್. ವಾಗ್ಗೇವಿ ಇತರಸಿದ್ದರು.

    ಸಂಪನ್ಮೂಲ ವ್ಯಕ್ತಿ ಮಂಜುನಾಥ ಬಾರಿಕರ, ಎಸ್‌ಎಂ ಕೃಷ್ಣ ಶಿಕ್ಷಣ ಕಾಲೇಜು ಪ್ರಾಚಾರ್ಯ ಕೆ.ಎಸ್. ಗಂಗಾಧರ್, ನಿವೃತ್ತ ಪ್ರಾಚಾರ್ಯ ಕೆ.ವಿ.ಸುಜಾತಾ, ಶಿಕ್ಷಕಿಯರಾದ ಬಿ. ಶ್ರೀದೇವಿ, ಎಸ್.ಎಸ್. ಸಂಗೀತಾ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts