More

    ಹೊಸ ಎತ್ತರಕ್ಕೆ ಷೇರುಪೇಟೆ- ರೂಪಾಯಿ ಮೌಲ್ಯ ವೃದ್ಧಿ

    ಮುಂಬೈ: ಕೇಂದ್ರ ಸಚಿವ ಸಂಪುಟ ದೂರಸಂಪರ್ಕ, ಆಟೋಮೊಬೈಲ್​, ಆರೋಗ್ಯ ವಲಯಗಳಿಗೆ ಉತ್ತೇಜನಕಾರಿ ಪ್ಯಾಕೇಜ್​ಗೆ ಒಪ್ಪಿಗೆ ನೀಡಿದ ಬೆನ್ನಿಗೆ ಷೇರುಪೇಟೆಯಲ್ಲಿ ಗೂಳಿ ಓಟ ವೃದ್ಧಿಸಿ ಹೊಸ ದಾಖಲೆ ಬರೆದಿದೆ. ಸೆನ್ಸೆಕ್ಸ್​ನಲ್ಲಿ 476.11 (ಶೇ.0.82) ಅಂಶ ಹೆಚ್ಚಳವಾಗಿ ಬುಧವಾರದ ವಹಿವಾಟು 58,723.20 ಅಂತ್ಯಗೊಂಡಿತು. ಮಧ್ಯಂತರ ವಹಿವಾಟಿನಲ್ಲಿ 58,777.06ರವರೆಗೂ ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 139.45 (ಶೇ. 80) ಪಾಯಿಂಟ್​ ಏರಿಕೆ ಕಂಡು 17,519.45ಕ್ಕೆ ವಹಿವಾಟು ಮುಗಿಸಿತು.

    ಮಧ್ಯಂತರದಲ್ಲಿ 17,532.70ರವರೆಗೂ ಮುಟ್ಟಿತ್ತು. ಎರಡು ದಿನಗಳ ವಹಿವಾಟಿನಲ್ಲಿ ಷೇರು ಖರೀದಿ ಭರಾಟೆಯಿಂದ ಸಾಗಿದ್ದರಿಂದ ಷೇರುಪೇಟೆಯ ಮಾರುಕಟ್ಟೆ ಬಂಡವಾಳ 3.35 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಹೂಡಿಕೆದಾರ ಸಂಪತ್ತು ವೃದ್ಧಿಸಿದೆ. ಎರಡು ದಿನಗಳ ಹಿಂದೆ ಇದು 2.59 ಲಕ್ಷ ಕೋಟಿ ರೂಪಾಯಿ ಇತ್ತು. ಎನ್​ಟಿಪಿಸಿ ಷೇರು ಮೌಲ್ಯ ಶೇ. 7 ಹೆಚ್ಚಳವಾಗಿದ್ದು, ಅಧಿಕ ಲಾಭ ದಾಖಲಿಸಿದೆ. ಭಾತಿರ್ ಏರ್​ಟೆಲ್​, ಟೈಟಾನ್​, ಎಚ್​ಸಿಎಲ್​ ಟೆಕ್​, ಎಸ್​ಬಿಐ, ಪವರ್​ ಗ್ರಿಡ್​, ಟಿಸಿಎಸ್​, ಇಂಡಸ್​ ಇಂಡ್​ ಬ್ಯಾಂಕ್​ಗಳಿಗೆ ಲಾಭವಾಗಿದೆ. ಇನ್ನೊಂದೆಡೆ ಏಷ್ಯನ್​ ಪೇಂಟ್ಸ್​, ಆ್ಯಕ್ಸಿಸ್​ ಬ್ಯಾಂಕ್​, ಅಲ್ಟ್ರಾ ಟೆಕ್​ ಸಿಮೆಂಟ್​, ಬಜಾಜ್​ ೈನಾನ್ಸ್​, ನೆಸ್ಲೆ ಇಂಡಿಯಾ ಷೇರುಗಳು ಇಳಿಕೆ ಕಂಡಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬ್ರೆಂಟ್​ ದರ್ಜೆಯ ತೈಲದ ಬೆಲೆ ಶೇ. 1.05ರಷ್ಟು ಹೆಚ್ಚಳ ಕಂಡು ಪ್ರತಿ ಬ್ಯಾರೆಲ್​ ದರ 74.37 ಡಾಲರ್​ಗೆ ಏರಿಕೆ ಕಂಡಿದೆ.

    ರೂಪಾಯಿ ಮೌಲ್ಯ ವೃದ್ಧಿ: ಡಾಲರ್​ ಎದುರು ರೂಪಾಯಿ ಮೌಲ್ಯ 18 ಪೈಸೆ ವೃದ್ಧಿಸಿದೆ. ಪ್ರತಿ ಡಾಲರ್​ಗೆ 73.50 ರೂಪಾಯಿಗೆ ವಿದೇಶಿ ವಿನಿಮಯ ಬುಧವಾರ ಸ್ಥಿರಗೊಂಡಿದೆ.

    ಬಂಗಾರದ ಬೆಲೆ ದುಬಾರಿ
    ದೆಹಲಿಯ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 438 ರೂ. ಹೆಚ್ಚಳವಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 46,214 ರೂ.ಗೆ ಏರಿಕೆ ಕಂಡಿದೆ. ಬೆಳ್ಳಿ ಧಾರಣೆ 633 ರೂ. ವೃದ್ಧಿಸಿ ಕೆ.ಜಿ. ದರ 62,140 ರೂ. ಮುಟ್ಟಿದೆ. ಅಂತಾರಾಷ್ಟ್ರೀಯ ಚಿನ್ನದ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​ ಬಂಗಾರಕ್ಕೆ 1,802 ಡಾಲರ್​ ಮತ್ತು ಒಂದು ಔನ್ಸ್​ ಬೆಳ್ಳಿಗೆ 23.79 ಡಾಲರ್​ ಇದ್ದು, ಬೆಲೆಯಲ್ಲಿ ಯಥಾಸ್ಥಿತಿ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts