More

    ಹೊಲಕ್ಕೆ ಹೋಗುವ ದಾರಿ ಬಂದ್

    ಶಿರಸಿ: ರೈತರ ಹೊಲಕ್ಕೆ ಹೋಗುವ ದಾರಿಯನ್ನು ಖಾಸಗಿಯವರು ದಿಢೀರ್ ಬಂದ್ ಮಾಡಿದ್ದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ತಾಲೂಕಿನ ಮಳಲಗಾಂವದಲ್ಲಿ ನಡೆಯಿತು.

    ಮಳಲಗಾಂವ ಗ್ರಾಮದಿಂದ ಹೊಲಗಳಿಗೆ ತೆರಳುವ ರಸ್ತೆಯನ್ನು ಮಾಲ್ಕಿ ಜಮೀನಿನ ರೈತರಿಬ್ಬರೂ ಬಂದ್ ಮಾಡಿದ ಕಾರಣ ಪ್ರತಿಭಟನೆ ನಡೆಸಲಾಯಿತು. ಕೆಳ ಭಾಗದ ಜಮೀನುಗಳಿಗೆ ಸಾಗುವ ಸುಮಾರು 58 ರೈತ ಕುಟುಂಬಗಳು ದಾರಿಯಿಲ್ಲ ಕಾರಣ ಆಕ್ಷೇಪಿಸಿದರು. ಹೊಲಕ್ಕೆ ಸಾಗುವ ಏಕೈಕ ಮಾರ್ಗ ಇದೊಂದೇ ಆಗಿದ್ದು, ದಾರಿಯ ಆರಂಭದಲ್ಲೆ ಖಾಸಗಿಯವರು ಬಂದ್ ಮಾಡಿದ್ದಾರೆ. ಹೀಗಾಗಿ ಬೆಳೆದ ಬೆಳೆಯನ್ನು ಮನೆಗೆ ತರಲು ಆಗುತ್ತಿಲ್ಲ. ಈ ಕುರಿತು ರೈತರು ಸಂಬಂಧಿಸಿದ ಇಲಾಖೆಗಳಿಗೆ ಮನವಿ ನೀಡಿದರೂ ಯಾವುದೆ ಪ್ರಯೋಜನ ಇಲ್ಲವಾಗದ ಕಾರಣ ನೂರಕ್ಕೂ ಅಧಿಕ ರೈತರು ತಮ್ಮ ಹೊಲದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

    ಘಟನಾ ಸ್ಥಳಕ್ಕೆ ಉಪತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ಕಂದಾಯ ನಿರೀಕ್ಷಕಿ ಮಂಜುಳಾ, ಬನವಾಸಿ ಠಾಣೆ ಪಿಎಸ್​ಐ ಜೆ.ಬಿ. ಸೀತಾರಾಮ, ಎಎಸ್​ಐ ಕಮಲಾಕರ, ಬಿಸಲಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಭಟ್ಟ, ಪಿಡಿಒ ವಾಮಭಾಯಿ ಚೌಹಾಣ, ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts