More

    ಹೊರಗುತ್ತಿಗೆ ನೌಕರರ ಹಕ್ಕು ರಕ್ಷಿಸಿ

    ಯಾದಗಿರಿ : ಸರ್ಕಾರಿ ಇಲಾಖೆ ಅಧಿಕಾರಿಗಳು ಮತ್ತು ಏಜೆನ್ಸಿಯವರು ಹೊರಗುತ್ತಿಗೆ ನೌಕರರ ಹಕ್ಕುಗಳನ್ನು ರಕ್ಷಿಸಿ ಅವರ ಸಮಸ್ಯೆಗೆ ತP್ಷÀಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಾಕೀತು ಮಾಡಿದರು.

    ಜಿಪಂ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಇಲಾಖೆ ಮತ್ತು ನಿಗಮಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯ ಕುರಿತು ಅರಿವು ಕರ‍್ಯಕ್ರಮ ಉದ್ಘಾಟಿಸಿದ ಅವರು, ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ಸೇವೆ ಅತಿ ಮುಖ್ಯವಾಗಿದೆ. ಅವರ ದಿನನಿತ್ಯದ ಜೀವನದ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ವೇತನ, ವಿಮೆ ಅನುದಾನ ಒದಗಿಸಿ ನೆರವಾಗುವಂತೆ ಸಲಹೆ ನೀಡಿದರು.


    ಹೊರಗುತ್ತಿಗೆ ನೌಕರರ ನೇಮಕದಲ್ಲಿ ಇಲಾಖಾ ಮಟ್ಟದ ಅಧಿಕಾರಿಗಳು ನಿಯಮ ಪಾಲಿಸಿ ಅವರ ಹಕ್ಕು ರಕ್ಷಣೆ ಜತೆಗೆ ಸಮಸ್ಯೆಗೆ ಸ್ಪಂದಿಸಬೇಕು. ಅದರಂತೆ ನೌಕರರನ್ನು ಆಯಾ ಇಲಾಖೆಗೆ ಒದಗಿಸುವ ಏಜೆನ್ಸಿಗಳು ವೇತನವನ್ನು ಹೆಚ್ಚು ಕಡಿತ ಮಾಡದೆ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡು ನೆರವಾಗಬೇಕು ಎಂದರು.


    ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಕಾರ್ಮಿಕರ ರಾಜ್ಯ ವಿಮಾ ನಿಗಮ ಶಾಖಾ ವ್ಯವಸ್ಥಾಪಕ ರಾಘವೇಂದ್ರ, ಆಡಳಿತ ವಿಮಾ ವೈದ್ಯಾಧಿಕಾರಿ ಕಿರಣಕುಮಾರ ಮದನಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts