More

    ಹೊರಗಿನವರು ಎಷ್ಟು ವರ್ಷ ಚಿತ್ರದುರ್ಗ ಆಳಬೇಕು

    ಚಿತ್ರದುರ್ಗ: ಲೋಕಸಭಾ ಚುನಾವಣೆಗಳಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಬಹಳ ವರ್ಷಗಳಿಂದ ಅನ್ಯಾಯವಾಗುತ್ತಿದೆ. ಹೊರಗಿನವರು ಇನ್ನೆಷ್ಟು ವರ್ಷ ಜಿಲ್ಲೆ ಆಳಬೇಕು ಎಂದು ಕಾಂಗ್ರೆಸ್ ಮುಖಂಡ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ ಪ್ರಶ್ನಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿಂದ ವರಿಷ್ಠರವರೆಗೂ ಮೊದಲ ಸಾಲಿನಲ್ಲೇ ನನ್ನ ಹೆಸರು ಕೇಳಿಬಂದಿತ್ತು. ಹೀಗಾಗಿ ಕ್ಷೇತ್ರದ ಅಭ್ಯರ್ಥಿ ಘೋಷಿಸಲು ವಿಳಂಬವಾಯಿತು. ನಾಮಪತ್ರ ಸಲ್ಲಿಕೆ ಮುಕ್ತಾಯದವರೆಗೂ ಅವಕಾಶವಿದ್ದು, ಹೈಕಮಾಂಡ್ ಮತ್ತೊಮ್ಮೆ ಪರಿಶೀಲಿಸಿ ನನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

    ವರಿಷ್ಠರು ಸ್ಥಳೀಯರನ್ನು ಪರಿಗಣಿಸಿ, ಬದಲಾವಣೆ ಮಾಡಿದರೆ ದಿಗ್ವಿಜಯ ಸಾಧಿಸುವ ವಿಶ್ವಾಸವಿದೆ. ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರು, ಸಮಾಜದ ಮುಖಂಡರು, ಅಭಿಮಾನಿಗಳ ಸಭೆ ಕರೆದು, ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮುಂದಿನ ನಡೆ ತಿಳಿಸಲಾಗುವುದು ಎಂದರು.

    ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸಿರಬಹುದು. ‘ಬಿ’ಫಾರಂ ಅಂತಿಮ ಆಗುವವರೆಗೂ ನಮ್ಮ ಪ್ರಯತ್ನ ಮುಂದುವರೆಯಲಿದೆ. ಮಾದಿಗ, ಭೋವಿ, ಛಲವಾದಿ, ಲಂಬಾಣಿ ಸೇರಿ ಎಸ್ಸಿ ಪೈಕಿ ಯಾರಿಗೇ ಟಿಕೆಟ್ ನೀಡಲಿ. ಅದಕ್ಕೆ ಅಭ್ಯಂತರವಿಲ್ಲ. ಸ್ಥಳೀಯರಿಗೆ, ಜನಸಂಖ್ಯೆ ಆಧರಿಸಿ ಬಹುಸಂಖ್ಯಾತರಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಚೌಳೂರು, ಮಂಜುನಾಥ್, ಗ್ರಾಪಂ ಸದಸ್ಯ ಆನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts