More

    ಹೊಂದಾಣಿಕೆ ರಾಜಕಾರಣ ಅನಿವಾರ್ಯ

    ಕೆ.ಆರ್.ನಗರ: ಆತ್ಮಸಾಕ್ಷಿ, ಸ್ವಾಭಿಮಾನ, ಮರ್ಯಾದೆಗಳನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುವವರು ಮಾತ್ರ ರಾಜಕಾರಣದಲ್ಲಿರಬೇಕು ಎಂದು ಶಾಸಕ ಸಾ.ರಾ.ಮಹೇಶ್ ಬೇಸರ ವ್ಯಕ್ತಪಡಿಸಿದರು.
    ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗಾಂಧೀಜಿಯವರಂತಹ ಹಲವು ನಾಯಕರುಗಳ ಹೋರಾಟ ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ರೈಲು ಅಪಘಾತದ ಹೊಣೆ ಹೊತ್ತು ರಾಜೀನಾಮೆ ನೀಡಿದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಸಿದ್ಧಾಂತವೆಲ್ಲಿ, ಇಂದು ಕೌರವರಂತೆ ಮೆರೆಯುತ್ತಿರುವ ಸರ್ಕಾರವೆಲ್ಲಿ ಎಂದು ಕಿಡಿಕಾರಿದರು.ವಿಧಾನ ಪರಿಷತ್ ಮಾಜಿ ಸದಸ್ಯರಾದ ಚಿನ್ನಸ್ವಾಮಿ, ಕೆ.ಸಿ.ಪುಟ್ಟಸಿದ್ದಶೆಟ್ಟಿ, ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ವಿಧವಾ ವೇತನ ಹಾಗೂ ಹಿರಿಯ ನಾಗರಿಕರ ವೇತನದ ಮಂಜುರಾತಿ ಪತ್ರವನ್ನು ಶಾಸಕ ಸಾ.ರಾ.ಮಹೇಶ್ ವಿತರಿಸಿದರು.
    ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಹಸೀಲ್ದಾರ್ ಸಂತೋಷ್, ಇಒ ಸತೀಶ್, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಪ್ರೊಬೆಷನರಿ ಎಸಿ ಹರೀಶ್, ಬಿಇಒ ಗಾಯತ್ರಿ, ಪಿಎಸ್‌ಐ ಚಂದ್ರಹಾಸ, ಸಿಡಿಪಿಒ ಪೂರ್ಣಿಮಾ, ಜೆಡಿಎಸ್ ತಾಲೂಕು ಅಧ್ಯಕ್ಷ ಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts