More

    ಹೈನುಗಾರಿಕೆಗೆ ಸಾಲ ಸಂಪರ್ಕ ಯೋಜನೆ; ಸದುಪಯೋಗಪಡೆದುಕೊಳ್ಳುವಂತೆ ಗುರುಪ್ರಸಾದ್ ಮನವಿ

    ರಾಮನಗರ: ಹೈನುಗಾರಿಕೆ ನಡೆಸಿ ಜೀವನ ನಡೆಸಬೇಕೆಂಬ ಇಚ್ಛಾಶಕ್ತಿ ಹೊಂದಿರುವ ಕುಟುಂಬಗಳಿಗೆ ಕೆಎಂಎಫ್ ಜತೆಗೂಡಿ ಬ್ಯಾಂಕ್‌ಗಳು ಸಾಲ ನೀಡುವ ಯೋಜನೆ ರೂಪಿಸಿದ್ದು ಜಿಲ್ಲೆಯ ಜನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಗುರುಪ್ರಸಾದ್ ಮನವಿ ಮಾಡಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಬುಧವಾರ ಆಯೋಜಿಸಿದ್ದ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ವಾತನಾಡಿ, ರೇಷ್ಮೆ ಮತ್ತು ಹೈನುಗಾರಿಕೆಗೆ ರಾಮನಗರ ಜಿಲ್ಲೆ ಖ್ಯಾತಿ ಪಡೆದಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ರೈತರು ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಇತ್ತೀಚೆಗೆ ಕೆಎಂಎಫ್ ಸಹಯೋಗದಲ್ಲಿ ಹೈನುಗಾರಿಕೆಗೆ ಸಾಲ ನೀಡುವ ಹೊಸ ಯೋಜನೆ ಅನುಷ್ಠಾನದಲ್ಲಿದೆ. ಕುಟುಂಬಕ್ಕೆ ಎರಡು ಹಸುಗಳ ಖರೀದಿಗೆ ಸಾಲ ನೀಡಲಾಗುತ್ತದೆ. ಸಾಲ ಪಡೆದು ಹಸು ಖರೀದಿ ವಾಡಿ ಹೈನುಗಾರಿಕೆ ನಡೆಸುವ ರೈತರು ಹಾಲನ್ನು ಕೆಎಂಎಫ್‌ಗೆ ನೀಡಬೇಕಾಗುತ್ತದೆ. ವಾಸಾಂತ್ಯದಲ್ಲಿ ರೈತರಿಗೆ ನೀಡಬೇಕಾದ ಹಣದಲ್ಲಿ ಹಸುಗಳಿಗಾಗಿ ಪಡೆದ ಸಾಲದ ಕಂತನ್ನು ಕೆಎಂಎಫ್‌ನವರು ಬ್ಯಾಂಕ್‌ನವರಿಗೆ ಪಾವತಿಸಿ ಉಳಿದ ಹಣವನ್ನು ರೈತರಿಗೆ ನೀಡುತ್ತಾರೆ. ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ವಾಡಿದರು.

    ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಟ್ಟಲಾಗದೆ ಸುಸ್ತಿದಾರರಾದವರು ಖಾಸಗಿಯವರ ಬಳಿ ಸಾಲ ಪಡೆದು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜನಸಾವಾನ್ಯರು, ರೈತರು ಮತ್ತು ವಾಣಿಜ್ಯೋದ್ಯಮಿಗಳು ಉದ್ಯಮ ವಿಸ್ತರಣೆಗೆ ಬೇಕಾದ ಸಾಲವನ್ನು ಬ್ಯಾಂಕ್‌ಗಳಿಂದ ಪಡೆಯಬಹುದಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ, ಮನೆ ಕಟ್ಟಲು, ವಾಹನ ಖರೀದಿಸುವುದು ಸೇರಿ ಇತರ ಅಭಿವೃದ್ಧಿ ಕಾರ್ಯಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಹಾಗೂ ಸಕಾಲದಲ್ಲಿ ಸಾಲ ಮರುಪಾವತಿಸಿ ವೈಯಕ್ತಿಕವಾಗಿ ಪ್ರಗತಿಹೊಂದುವುದರ ಜತೆಗೆ ಬ್ಯಾಂಕ್ ಬೆಳವಣಿಗೆಗೂ ಸಹಕಾರಿಯಾಗಬೇಕು ಎಂದರು.

    ಎಸ್‌ಎಲ್‌ಬಿಸಿಯ ಸಹಾಯಕ ವ್ಯಾನೇಜರ್ ಎಂ.ಪಿ.ಪ್ರವೀಣ್ ವಾತನಾಡಿ, ದೇಶಕ್ಕೆ ಸ್ವಾತಂತ್ರ್ತ್ಯ ಬಂದು 75 ವರ್ಷಗಳ ಸುವರ್ಣ ಸಂಭ್ರಮದಲ್ಲಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮ ರೂಪಿಸಿದೆ. ಜನರ ಮನೆ ಬಾಗಿಲಿಗೆ ಸರ್ಕಾರಿ ಸವಲತ್ತುಗಳು ತಲುಪಿಸಬೇಕೆಂದು ಇದರ ಉದ್ದೇಶವಾಗಿದೆ ಎಂದರು.

    ಸಹಾಯಕ ಕೃಷಿ ನಿರ್ದೇಶಕ ಉಮೇಶ್, ಡಿಐಸಿ ಡೆಪ್ಯುಟಿ ಡೈರಕ್ಟೆರ್ ದೊರೈರಾಜ್, ಪ್ರಶಾಂತ್ ಪ್ರಭು ಇನ್ನು ಮುಂತಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts