More

    ಹೈಟೆಕ್-5109ರಲ್ಲಿದೆ ಎಲ್ಲ ಪ್ರತಿರೋಧಕ ಶಕ್ತಿ – ಎ.ಎಸ್.ಎಂ. ವಸಂತಕುಮಾರ

    ಬೈಲಹೊಂಗಲ: ನಿರಂತರ ಮಳೆಯಿಂದ ಮೆಕ್ಕೆಜೋಳದ ಗಿಡಗಳು ಬಿದ್ದು ಹೋಗುವುದರಿಂದ ರೈತರಿಗೆ ಭಾರಿ ನಷ್ಟವಾಗುತ್ತದೆ. ಆದರೆ, ಹೈಟೆಕ್ ಕಂಪನಿಯ 5109 ಬಿತ್ತನೆ ಬೀಜವು ಎಲ್ಲ ಪ್ರತಿರೋಧಗಳನ್ನು ತಡೆಯುತ್ತದೆ ಎಂದು ಕಂಪನಿ ಪ್ರತಿನಿಧಿ ಎ.ಎಸ್.ಎಂ. ವಸಂತಕುಮಾರ ಹೇಳಿದರು.

    ತಾಲೂಕಿನ ವಕ್ಕುಂದ ಗ್ರಾಮದ ರೈತ ಕಿರಣ ಅಶೋಕ ಬಾಗೇವಾಡಿ ಅವರ ತೋಟದಲ್ಲಿ ಈಚೆಗೆ ಏರ್ಪಡಿಸಿದ್ದ ಹೈಟೆಕ್-5109 ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಮಳೆ ಹೆಚ್ಚಾದ ಪರಿಣಾಮ ಹಲವು ಕಂಪನಿಗಳ ಮೆಕ್ಕೆಜೋಳ ರೋಗಕ್ಕೆ ತುತ್ತಾಗಿದೆ. ಇದರಿಂದ ಹೊಲದಲ್ಲಿ ಜೋಳದ ಗಿಡ ಬಿದ್ದು ಹೋಗಿವೆ.

    ಸರಿಯಾಗಿ ಇಳುವರಿ ಬಾರದೆ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಹೈಟೆಕ್ ಕಂಪನಿಯ ಮೆಕ್ಕೆಜೋಳದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಒಂದೇ ಸಮನಾದ ತೆನೆಗಳಿಂದ ಅಧಿಕ ಇಳುವರಿ ಹಾಗೂ ಕಟಾವಿನ ಹಂತದವರೆಗೆ ಗಿಡ ಹಸಿರಾಗಿರುತ್ತದೆ. ಗಿಡಗಳು ಸಹ ಕೆಳಕ್ಕೆ ಬೀಳುವುದಿಲ್ಲ ಎಂದರು.

    ಹೈಟೆಕ್ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ದೇಶಾದ್ಯಂತ ಮನ್ನಣೆ ಪಡೆದಿದೆ. ಜಿಲ್ಲೆಯ ರೈತರು ಈ ತಳಿಯ ಬಗ್ಗೆ ಮಾಹಿತಿ ಪಡೆದು ಬಿತ್ತನೆ ಮಾಡಬೇಕೆಂದು ಸಲಹೆ ನೀಡಿದರು. ಕಂಪನಿಯ ಅಧಿಕಾರಿಗಳಾದ ಪ್ರಶಾಂತ ವಾಲಿ, ವೀರಪ್ಪ ನರಸಣ್ಣವರ, ವಿಠ್ಠಲ, ನಿರ್ವಾಣಿ, ಮಂಜು, ಮಹಾಗುಂಡಪ್ಪ, ವಿತರಕ ಉಮೇಶ ಪಾಟೀಲ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಮಾರಾಟಗಾರರು ಪಾಲ್ಗೊಂಡಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts