More

    ಹೆಸರು ಖರೀದಿಗೆ ಜಿಲ್ಲಾಡಳಿತ ಹಿಂದೇಟು

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ರೈತರು ಈ ಬಾರಿ ಹಲವು ಸಮಸ್ಯೆಗಳ ಮಧ್ಯೆ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಅನಿವಾರ್ಯವಾಗಿ ಕೈಗೆ ಬಂದ ಬೆಲೆಗೆ ಹೆಸರು ಮಾರಾಟ ಮಾಡುತ್ತಿದ್ದಾರೆ. ಪ್ರಾರಂಭದ ಹಂತದಲ್ಲಿ ಕ್ವಿಂಟಾಲ್​ಗೆ 7ರಿಂದ 8 ಸಾವಿರ ರೂ.ಗಳಿದ್ದ ದರ ಈಗ 4ರಿಂದ 6 ಸಾವಿರ ರೂ.ಗೆ ಇಳಿದಿದೆ. ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾಳಾಗಿದೆ. ಉಳಿದ ಅಲ್ಪ ಸ್ವಲ್ಪ ಬೆಳೆಗೆ ಉತ್ತಮ ಬೆಲೆ ಇಲ್ಲದ್ದರಿಂದ ರೈತರು ಪರದಾಡುವಂತಾಗಿದೆ.

    ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ನಿಡಗುಂದಿ, ನಿಡಗುಂದಿಕೊಪ್ಪ, ಕುರಡಗಿ, ಡ.ಸ. ಹಡಗಲಿ, ಗುಜಮಾಗಡಿ, ಯರೇಬೇಲೇರಿ, ಜಕ್ಕಲಿ, ಮಾರನಬಸರಿ, ಬೂದಿಹಾಳ ಸೇರಿ ಹೋಬಳಿಯಾದ್ಯಂತ 1,200 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೀಜ ಬಿತ್ತನೆಯಾಗಿತ್ತು. ಆರಂಭದಲ್ಲಿ ತೇವಾಂಶ ಹೆಚ್ಚಳದಿಂದ ಹಳದಿ ರೋಗ, ಸೀರು ಬಾಧೆ ಕಾಡಿತ್ತು. ಸಾಕಷ್ಟು ಖರ್ಚು ಮಾಡಿ ಕೀಟ ನಾಶಕ ಸಿಂಪಡಣೆ ಮಾಡಿ ಬೆಳೆ ರಕ್ಷಿಸಲಾಗಿತ್ತು. ಇನ್ನೇನು ಹೆಸರು ಬುಡ್ಡಿ ಬಿಡಿಸಬೇಕು ಎನ್ನುವಷ್ಟರಲ್ಲಿ ಮಳೆ ಕಾಟ ಶುರುವಾಯಿತು. ಒಂದು ವಾರದಿಂದ ಹೋಬಳಿಯಾದ್ಯಂತ ಹೆಸರು ರಾಶಿ ಭರದಿಂದ ಸಾಗಿದೆ.

    ಖರೀದಿ ಕೇಂದ್ರ ಆರಂಭಿಸಿ: ಕೇಂದ್ರ ಸರ್ಕಾರವು 2022-23ನೇ ಸಾಲಿನಲ್ಲಿ ಹೆಸರು ಕಾಳಿಗೆ ಪ್ರತಿ ಕ್ವಿಂಟಾಲ್​ಗೆ 7,755 ರೂ. ನಿಗದಿ ಮಾಡಿದೆ. ಆದರೆ, ಅದರ ಫಲ ಮಾತ್ರ ರೈರಿಗೆ ದಕ್ಕದಂತಾಗಿದೆ. ಸರ್ಕಾರ ಶೀಘ್ರವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿ ಹೆಸರು ಖರೀದಿಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿಯೇ ಪ್ರಥಮವಾಗಿ ಹೆಸರು ಕಾಳು ಖರೀದಿ ಕೇಂದ್ರ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಗದಗ ಜಿಲ್ಲೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ತಕ್ಷಣವೇ ಹೆಸರು ಖರೀದಿ ಕೇಂದ್ರ ಸ್ಥಾಪಿಸಿ, ಖರೀದಿಸಲಾಗುತ್ತದೆ.
    ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts