More

    ಹೆಸರು ಕಾಳು ಖರೀದಿ ಕೇಂದ್ರಕ್ಕೆ ಚಾಲನೆ

    ನರಗುಂದ: ರೈತರ ಬಹು ದಿನಗಳ ಬೇಡಿಕೆಯಾದ ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಸರ್ಕಾರ ಚಾಲನೆ ನೀಡಿದ್ದು, ಅರ್ಹ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ ಹೇಳಿದರು.

    ಪಟ್ಟಣದ ಎಪಿಎಂಸಿ ಪ್ರಾಂಗಣದ ಕ್ಲೀನಿಂಗ್ ಆಂಡ್ ಗ್ರೇಡಿಂಗ್ ಕೇಂದ್ರದಲ್ಲಿ ಆರಂಭಿಸಲಾಗಿರುವ 2020-21 ನೇ ಸಾಲಿನ ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಒಟ್ಟು 6,680 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದರು. 53,440 ಕ್ವಿಂಟಾಲ್ ಹೆಸರು ಉತ್ಪಾದನೆಯಾಗಿದೆ. ಸರ್ಕಾರದ ಆವರ್ತ ನಿಧಿ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆದಿರುವ ಹೆಸರನ್ನು ಕ್ವಿಂಟಾಲ್​ಗೆ 7,196 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು. ಕರೊನಾ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಜನದಟ್ಟಣೆ ನಿಯಂತ್ರಿಸಲು ತಾಲೂಕಿನ ಚಿಕ್ಕನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ ಗ್ರಾಮಗಳಲ್ಲಿಯೂ ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ರೈತರಿಂದ ತಲಾ 4 ಕ್ವಿಂಟಾಲ್ ಎಫ್​ಎಕ್ಯೂ ಗುಣ ಮಟ್ಟದ ಹೆಸರು ಉತ್ಪನ್ನವನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿಸಲಿದೆ ಎಂದು ತಿಳಿಸಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ. ಮೇಟಿ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷ ಮಲ್ಲಪ್ಪ ಭೋವಿ, ಸಂಬಾಜೀ ಕಾಶೀದ, ಸಹಕಾರಿ ಮಾರಾಟ ಮಹಾ ಮಂಡಳದ ಅಧಿಕಾರಿ ವಿನೋದ ಚವರಡ್ಡಿ, ಟಿಎಪಿಸಿಎಂಎಸ್ ವ್ಯವಸ್ಥಾಪಕ ವೈ.ಎಚ್. ಪಾಟೀಲ, ಮಾಬುಸಾಬ ಕಮ್ಮಾರ, ಸಿ.ಬಿ. ಕರಿಗೌಡ್ರ, ವಿ.ಜಿ. ಹನ್ನಿಕೇರಿ, ಎಸ್.ಕೆ. ಪಾಟೀಲ, ಶರಣು ಘಾಟಗೆ, ಮಹೇಶಗೌಡ ಪಾಟೀಲ, ಮಹಾಂತೇಶ ಗುಂಡಳ್ಳಿ, ಅಲ್ಲಿಸಾಬ ನದಾಫ್, ರಮೇಶ ಮರಿಯಣ್ಣವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts