More

    ಹೆರಿಗೆ ಬಳಿಕ ಬಾಣಂತಿಗೆ ಬಂತು ಕರೊನಾ

    ಬಾಬುರಾವ ಯಡ್ರಾಮಿ ಕಲಬುರಗಿ: ಮಹಾರಾಷ್ಟ್ರದಿಂದ ಬಂದಿದ್ದ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾದ ಎರಡು ದಿನ ಬಳಿಕ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇದು ಹೆರಿಗೆ ಮಾಡಿಸಿದ ವೈದ್ಯರು, ಸಹಾಯಕ ಸಿಬ್ಬಂದಿ, ಆಯಾ ಹಾಗೂ ಆ ವಾರ್ಡನಲ್ಲಿದ್ದ ರೋಗಿಗಳನ್ನು ಕಂಗೆಡುವಂತೆ ಮಾಡಿದೆ.
    ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಈ ಹಿಂದೆ ಬಾಲಕನಿಗೆ ಮೂಳೆ ಮುರಿತದ ಶಸ್ತ್ರಚಿಕಿತ್ಸೆ ಬಳಿಕ ಕರೊನಾ ಪತ್ತೆಯಾಗಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕರೊನಾ ಸೋಂಕಿತವೊಬ್ಬ ಜಿಮ್ಸ್ಗೆ ದಾಖಲಾದ ಬಳಿಕ ತಪ್ಪಿಸಿಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ಸೇರಿ ಎಡವಟ್ಟು ಮಾಡಿದ್ದ. ಇದೀಗ ಹೆರಿಗೆ ನಂತರ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.
    ಯಾದಗಿರಿ ಜಿಲ್ಲೆಯ 25 ವರ್ಷದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದಾಗ ಕುಟುಂಬದವರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸುವ ಮೂಲಕ ಕರ್ತವ್ಯ ಮೆರೆದರು. ನಂತರ ಆಕೆಗೆ ಜ್ವರ ಕಾಣಿಸಿಕೊಂಡಿತು. ಟ್ರಾವೆಲ್ ಹಿಸ್ಟರಿ ಬಗ್ಗೆ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ. ಇದರಿಂದಾಗಿ ಸಂಶಯಗೊಂಡು ಕಫ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈಗ ವರದಿ ಪಾಸಿಟಿವ್ ಬಂದಿದೆ. ತಕ್ಷಣವೇ ಮಗುವನ್ನು ಬೇರ್ಪಡಿಸಿ ಬಾಣಂತಿಯನ್ನು ಐಸೋಲೇಷನ್ ಮಾಡಲಾಗಿದೆ. ಹೆರಿಗೆ ಮಾಡಿಸಿದ ವೈದ್ಯರು-ವೈದ್ಯಕೀಯ ಸಿಬ್ಬಂದಿ, ತಪಾಸಣೆ ನಡೆಸಿದ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿಯನ್ನು ಸಹ ಕ್ವಾರಂಟೈನ್ ಮಾಡಲಾಗಿದೆ.

    ಹೆರಿಗೆ ನೋವಿನಿಂದ ಬಳಲುತ್ತಿದ್ದ ಈಕೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಟ್ಟಿದ್ದೇವೆ. ಅದಾದ ಎರಡು ದಿನ ಬಳಿಕ ಕರೊನಾ ಪಾಸಿಟಿವ್ ಗೊತ್ತಾಗಿದ್ದರಿಂದ ಒಂದಿಷ್ಟು ಆತಂಕ ಶುರುವಾಗಿದೆ. ಮುಂಜಾಗ್ರತಾ ಕ್ರಮ ಪಾಲಿಸಿದ್ದರಿಂದ ನಮಗೆ ಕರೊನಾ ಬರುವ ಸಾಧ್ಯತೆ ಇಲ್ಲ. ಹೆರಿಗೆ ಮಾಡಿಸಿ ಕರ್ತವ್ಯ ನೆರವೇರಿಸಿದ್ದು ಖುಷಿ ತಂದಿದೆ.
    | ಹೆಸರು ಹೇಳಲಿಚ್ಛಿಸದ ಜಿಮ್ಸ್ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts