More

    ಹೆದ್ದಾರಿ ತಡೆದು ಗ್ರಾಮಸ್ಥರು ಆಕ್ರೋಶ

    ಸೇಡಂ: ಆಡಕಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ವಿಂಗಡಣೆ ಮಾಡಿ ಕುರುಕುಂಟಾ ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದ್ದು, ಆಡಕಿ ಕ್ಷೇತ್ರವನ್ನೇ ಮುಂದುವರೆಸುವಂತೆ ಒತ್ತಾಯಿಸಿ ಗ್ರಾಮದ ಬಳಿಯ ವಾಗ್ದಾರಿ- ರೆಬ್ಬನಪಲಿ ಹೆದ್ದಾರಿಯಲ್ಲಿ ಸಂಚಾರ ತಡೆದು ಗ್ರಾಮಸ್ಥರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
    ಆಡಕಿ ರಾಜ್ಯ ಹೆದ್ದಾರಿ 10ರ ಮುಖ್ಯ ರಸ್ತೆಯಲ್ಲಿದ್ದು, ಸುತ್ತ ಮುತ್ತಲಿನ 40 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ವ್ಯಾಪಾರ, ವಾಣಿಜ್ಯ, ರಾಜಕೀಯ ಚಟುವಟಿಕೆಯ ಪ್ರಮುಖ ತಾಣವಾಗಿದೆ. ಆಡಕಿ ಜಿಪಂ ಅಸ್ತಿತ್ವದಲ್ಲಿರುವದು ಈ ಭಾಗದ ಎಲ್ಲ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದ್ದು, ಎಲ್ಲ ಅಗತ್ಯ ಸೌಕರ್ಯವೂ ಕೇಂದ್ರ ಹೊಂದಿದೆ. ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮದಲ್ಲಿವೆ. ಹೀಗಾಗಿ ಆಡಕಿಯನ್ನೇ ಜಿಪಂ ಕೇಂದ್ರವಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
    ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಧೋಳ ಠಾಣೆ ಪಿಐ ಆನಂದರಾವ, ಸೇಡಂ ಸಿಪಿಐ ರಾಜಶೇಖರ ಹಳಗೋಧಿ, ಪಿಎಸ್ಐ ನಾನಾಗೌಡ ಪಾಟೀಲ್, ಎಎಸ್ಐ ದೇವಿಂದ್ರಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
    ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮನ್ನೆ, ಪ್ರಮುಖರಾದ ಗೋವಿಂದ ಮುಡುಗುಲ್, ರಘುಪತಿರೆಡ್ಡಿ ಮನ್ನೆ, ಶರಣಯ್ಯ ಕಲಾಲ್, ಬಾಲರೆಡ್ಡಿ ಗೊಲ್ಲಾ, ಸಾಯಿರೆಡ್ಡಿ ಮನ್ನೆ, ತಿರುಪತಿರೆಡ್ಡಿ ಯಲಗುಪಲ್ಲಿ, ವೆಂಕಟಪ್ಪ ನೀರೆಟಿ, ಶಾಮಪ್ಪ ಮಿಂದ, ಶ್ರೀನಿವಾಸ ಯಾದವ್, ಪ್ರವೀಣ ದೇಶಪಾಂಡೆ, ಭೀಮಯ್ಯ ಕಲಾಲ್, ರವೀಂದ್ರಗೌಡ, ಪ್ರಕಾಶ ಹೊಟ್ಟೆ, ಮೌನೇಶ ಬಡಿಗೇರ, ನರೇಂದ್ರರೆಡ್ಡಿ, ಮಹಾದೇವಪ್ಪ ಕೋನಾಪುರ, ನಾಗಪ್ಪ ಹುಂಡೇಕಾರ, ವೆಂಕಟಪ್ಪ ಕೊತ್ತಾಪಲ್ಲಿ, ಚಂದ್ರಕಾಂತ ಪಾಟೀಲ್, ಶ್ರೀಶೈಲರೆಡ್ಡಿ, ರಾಜೀವನರೆಡ್ಡಿ, ವೆಂಕಟೇಶ ಮುಡುಗುಲ, ನವೀನರೆಡ್ಡಿ, ವಿಜಯಕುಮಾರ ಪಾಟೀಲ್, ನವೀನಕುಮಾರ ರಾಜೋಳ್ಳ, ತಾಯಪ್ಪ ಭೋವಿ, ರಮೇಶ ನೀರೆಟಿ, ಸುರೇಶ ಬುರಕಲ್, ಶ್ರೀದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts