More

    ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ

    ಭಾಲ್ಕಿ: ಗಡಿ ಭಾಗದ ರೈತರು, ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಅಧಿಕಾರಿಗಳಿಂದ ಮಳೆ ಹಾನಿ ವರದಿ ತರಿಸಿಕೊಂಡು ಸಕರ್ಾರದ ಮಟ್ಟದಲ್ಲಿ ಪ್ರಯತ್ನಿಸಿ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದರು.

    ಮೇಹಕರ್ ಪ್ರದೇಶದ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಗುರುವಾರ ಸುರಿದ ಜೋರು ಮಳೆಗೆ ಗಡಿ ಭಾಗದ ರಸ್ತೆ, ಸೇತುವೆಗಳಿಗೆ ಧಕ್ಕೆ ಆಗಿದೆ. ನೂರಾರು ಜನರ ಮನೆಗಳಿಗೆ ಮಳೆ ನೀರು ನುಗ್ಗಿದೆ. ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಶಾಲಾ ಕೋಣೆಗಳು ಶಿಥಿಲಗೊಂಡಿವೆ. ಮನೆಗಳು ಕುಸಿತ ಕಂಡಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಳೆಹಾನಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.

    ಮಳೆ ನೀರು ನುಗ್ಗಿದ ಹಾಗೂ ಕುಸಿದ ಮನೆಗಳ ಸಂತ್ರಸ್ತರಿಗೆ ತಕ್ಷಣಕ್ಕೆ ತಾತ್ಕಾಲಿಕವಾಗಿ ತಲಾ 10 ಸಾವಿರ ರೂ. ಪರಿಹಾರ ಧನ ಕೊಡುವಂತೆ ತಹಸೀಲ್ದಾರ್ಗೆ ಸೂಚನೆ ನೀಡಿದ್ದೇನೆ. ಜತೆಗೆ ಬೆಳೆಹಾನಿ ಮತ್ತು ರಸ್ತೆ, ಸೇತುವೆಗಳ ಹಾನಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

    ಸಾಯಿಗಾಂವ, ಸಾಯಿಗಾಂವ ತಾಂಡಾ, ಬೋಳೆಗಾಂವ್, ತೂಗಾಂವ್(ಎಚ್), ಮೇಹಕರ್, ಅಳವಾಯಿ, ಎಲ್ಲಮ್ಮನ ವಾಡಿ, ಗುಂಜರಗಾ, ಅಟ್ಟರಗಾ ಸೇರಿ ವಿವಿಧೆಡೆ ಭೇಟಿ ನೀಡಿ ಮಳೆಹಾನಿ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಕೀತರ್ಿ ಚಾಲಕ್, ತಾಪಂ ಇಒ ದೀಪಿಕಾ ನಾಯ್ಕರ್, ಕೃಷಿ ಅಧಿಕಾರಿ ಶರಣಕುಮಾರ ಕಲ್ಯಾಣೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts