More

    ಹೂ ಬೆಳೆಗಾರರ ಬದುಕಲ್ಲಿ ಮುಳ್ಳು

    ವೀರೇಶ ಹಾರೊಗೇರಿ ಕಲಘಟಗಿ

    ಲಾಕ್​ಡೌನ್ ಕಾರಣದಿಂದ ಪಟ್ಟಣದ ಮಾರುಕಟ್ಟೆಗಳಲ್ಲಿ ರೈತರು ಬೆಳೆದ ಹೂಗಳನ್ನು ಖರೀದಿಸುವವರೇ ಇಲ್ಲದಂತಾಗಿದೆ. ಹೀಗಾಗಿ ಈ ವರ್ಷ ಹೂಗಳು ಮಾರಾಟವಾಗದೆ ಮತ್ತು ಸಮರ್ಪಕ ಬೆಲೆಯೂ ಸಿಗದೆ ರೈತರು ಪರದಾಡುವಂತಾಗಿದೆ.

    ತಾಲೂಕಿನಾದ್ಯಂತ ಅಂದಾಜು 75 ಹೆಕ್ಟೇರ್​ಗಿಂತಲೂ ಅಧಿಕ ಪ್ರದೇಶದಲ್ಲಿ ರೈತರು ಹೂಗಳನ್ನು ಬೆಳೆದಿದ್ದಾರೆ. ಹಿರೇಹೊನ್ನಿಹಳ್ಳಿ, ಬೇಗೂರು, ಬಿಸರಳ್ಳಿ, ಹುಲ್ಲಂಬಿ ಸೇರಿ ಇನ್ನೂ ಹಲವಾರು ಗ್ರಾಮಗಳಲ್ಲಿ ಹೆಚ್ಚಾಗಿ ಗಲಾಟೆ, ಸುಗಂಧಿ, ಚಂಡು ಹೂವುಗಳನ್ನು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಹೂ ಖರೀದಿಸುವವರೇ ಇಲ್ಲದಿರುವುದರಿಂದ ಬೆಳೆಗಾರರು ತೀವ್ರ ತೊಂದರೆ ಅನá-ಭವಿಸá-ತ್ತಿದ್ದಾರೆ. ಪ್ರತಿ ವರ್ಷ ಹೂವುಗಳ ಕೃಷಿಯಿಂದ ಕೊಂಚ ಲಾಭ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಎರಡು ತಿಂಗಳು ವಹಿವಾಟು ಇಲ್ಲದ್ದರಿಂದ ಬೆಳೆಯ ಖರ್ಚಿನ ಜತೆಗೆ ಸಾಲವನ್ನು ಬಳುವಳಿಯಾಗಿ ಪಡೆದಂತಾಗಿದೆ.

    ಪ್ರತಿ ವರ್ಷ ಬೆಳೆದ ಹೂಗಳನ್ನು ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮಾರಾಟಕ್ಕಾಗಿ ಕೊಂಡೊಯ್ಯಲಾಗುತ್ತಿತ್ತು. ಆದರೆ, ಬಿಡಿಸಿದ ಹೂಗಳನ್ನು ಮಾರುಕಟ್ಟೆಗೂ ಕೊಂಡೊಯ್ಯಲಾಗದೆ ಕರೊನಾ ಲಾಕ್​ಡೌನ್​ನಿಂದಾಗಿ ಹೊಲಗಳಲ್ಲಿಯೇ ಸುರಿಯá-ವಂತಾಗಿದೆ.

    ಈ ಕುರಿತು ರೈತರು ತಾಲೂಕಾಡಳಿತದ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳನ್ನು ಬೆಳೆದ ಕೃಷಿಕರ ಸಮೀಕ್ಷೆ ನಡೆಸಿ, ಪರಿಹಾರ ನೀಡಲು ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.

    ಮೂರು ತಿಂಗಳ ಹಿಂದೆಯೇ ತಾಲೂಕಿನ ಬಣದೂರ ಫಾಮರ್್​ನಿಂದ 3 ರೂಪಾಯಿ ಒಂದರಂತೆ ಚಂಡು ಹೂ, 70 ಪೈಸೆಗೆ ಒಂದರಂತೆ 600 ಗಲಾಟೆ ಹೂವುಗಳ ಸಸಿಗಳನ್ನು ತಂದು ನಾಟಿ ಮಾಡಿದ್ದೇವು. ಸಸಿ ನಾಟಿ ಮಾಡುವುದರಿಂದ ಹಿಡಿದು ಬೆಳೆ ಕೈ ಸೇರುವವರೆಗೂ ಬರೀ ಗಲಾಟೆ ಹೂ ಬೆಳೆಗೆ 15 ಸಾವಿರ ರೂ. ಖರ್ಚು ಮಾಡಿದ್ದೇನೆ. ಆದರೆ, ಕೈಗೆ ಸೇರಿದ್ದು ಒಂದು ಸಾವಿರ ರೂಪಾಯಿ ಮಾತ್ರ. ಈ ವರ್ಷ ನಮ್ಮ ಬದುಕಿನ ಜತೆಗೆ ದುಡಿಮೆಯನ್ನೂ ಕರೊನಾ ಮಹಾಮಾರಿ ಕಿತ್ತುಕೊಂಡಂತಾಗಿದೆ ಎಂದು ಹಿರೇಹೊನ್ನಿಹಳ್ಳಿ ಗ್ರಾಮದ ರೈತ ಮಹೇಶ ಪಾಟೀಲ ಅಳಲು ತೋಡಿಕೊಂಡಿದ್ದಾರೆ.

    ತಾಲೂಕಿನಾದ್ಯಂತ ಹೂ ಬೆಳೆಗಾರರ ಪ್ರಾಥಮಿಕ ಅಂದಾಜು ಹಾನಿ ವರದಿಯನ್ನು ಸರ್ಕಾರಕ್ಕೆ ಈಗಾಗಲೆ ಸಲ್ಲಿಸಲಾಗಿದೆ. ಸರ್ಕಾರದ ಮುಂದಿನ ನಿರ್ದೇಶನದನ್ವಯ ಕ್ರಮ ಜರುಗಿಸಲಾಗುವುದು.
    ಎಚ್.ವೈ. ಆಸಂಗಿ
    ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

    ಕಳೆದ ವರ್ಷ ಸುಗಂಧಿ ಹೂವಿನ ಬೆಲೆ ಪ್ರತಿ ಕೆಜಿಗೆ 100 ರಿಂದ 150 ರೂ.ಗಳಿಷ್ಟಿತ್ತು. ಆದರೆ, ಈ ಲಾಕ್​ಡೌನ ಘೊಷಣೆ ಆದಾಗಿನಿಂದ 10 ರೂಪಾಯಿಗೂ ಖರೀದಿಸುವವರು ಇಲ್ಲದಂತಾಗಿದೆ. 50 ರಿಂದ 60 ಸಾವಿರ ರೂ.ಗಳಷ್ಟು ಸಾಲ ಮೈಮೇಲೆ ಬಂದಿದೆ. ಬೆಳೆದ ಹೂಗಳೆಲ್ಲವೂ ನಾಶವಾಗಿ ಹೋಗಿವೆ. ಇದರಿಂದ ನಾವು ಜೀವನ ನಡೆಸುವುದು ದುಸ್ತರವಾಗಿದೆ.
    | ಶಿವಾನಂದ ಚಳಮಟ್ಟಿ ಬೇಗೂರು ಗ್ರಾಮದ ಸುಗಂಧಿ ಹೂ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts