More

    ಹೂ ಬೆಳೆಗಾರರಿಗೆ ಸಿಹಿ ಬದಲು ಕಹಿ

    ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಮಂಗಳವಾರ ನಡೆಯಲಿರುವ ಬಲಿಪಾಡ್ಯಮಿ ಹಬ್ಬಕ್ಕೆ ಎಪಿಎಂಸಿ ಆವರಣದ ಸಗಟು ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಸೋಮವಾರ ಭರ್ತಿಯಾಗಿತ್ತು.

    ಪುಷ್ಪಗಳ ಖರೀದಿಗಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ವ್ಯಾಪಾರದ ಭರಾಟೆ ಜೋರಾಗಿತ್ತು. ಆದರೆ, ಪ್ರತಿ ವರ್ಷ ಹಬ್ಬದಲ್ಲಿ ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿಯ 4ರಿಂದ 6 ಮಾರು ಪುಷ್ಪಕ್ಕೆ ತಲಾ 1ಸಾವಿರ ರೂ.ನಂತೆ ಮಾರಾಟವಾಗುತ್ತಿತ್ತು.

    ಈ ಬಾರಿ ರೂ. 100ಕ್ಕೆ ಎರಡ್ಮೂರು ಮಾರಿನಂತೆ ಮಾರಾಟವಾದ ಕಾರಣ ಹೂ ಬೆಳೆಗಾರರಿಗೆ ಸಿಹಿಗಿಂತ ಕಹಿ ಹೆಚ್ಚಾಗಿ, ಬರದ ಮಧ್ಯೆ ಇನ್ನಷ್ಟು ಬರೆ ಬಿದ್ದಂತಾಯಿತು. ತಾಲೂಕಿನಲ್ಲಿ ಹೇರಳವಾಗಿ ಬೆಳೆದದ್ದು ಕೂಡ ದರ ಇಳಿಯಲು ಕಾರಣವೆಂದು ಬೆಳೆಗಾರರು ಬೇಸರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts