More

    ಹೂಳಿನ ದಿಬ್ಬಕ್ಕೆ ಬಡಿದು ಬೋಟ್ ಮುಳುಗಡೆ

    ಹೊನ್ನಾವರ: ಮೀನುಗಾರಿಕೆಗೆಂದು ಅರಬ್ಬಿ ಸಮುದ್ರಕ್ಕೆ ತೆರಳುವಾಗ ಮೀನುಗಾರಿಕೆ ಬೋಟ್ ಕಾಸರಕೋಡ ಟೊಂಕದ ಶರಾವತಿ ಅಳಿವೆಯಲ್ಲಿ ಗುರುವಾರ ಬೆಳಗ್ಗೆ ಹೂಳಿನ ದಿಬ್ಬಕ್ಕೆ ಬಡಿದು ಬೋಟ್​ನ ಕೆಳಭಾಗ ಒಡೆದು ಮುಳುಗಡೆಯಾಗಿದೆ. ಬೋಟ್​ನಲ್ಲಿದ್ದ 24 ಮೀನುಗಾರರನ್ನು ರಕ್ಷಿಸಲಾಗಿದೆ.

    ಫೆಲಿಕ್ಸ್ ಲೋಪಿಸ್ ಅವರ ಮಾಲೀಕತ್ವದ ಸೇಂಟ್ ಅಂಥೋನಿ ಎಂಬ ಹೆಸರಿನ ಬೋಟ್ ಮುಳುಗಡೆಯಾಗಿದೆ. ಬೆಳಗ್ಗೆ 6.30ಕ್ಕೆ ಕಡಲಿನ ಅಲೆಯ ರಭಸಕ್ಕೆ ಬೋಟ್ ಸಿಲುಕಿ ಹೂಳಿನ ದಿಬ್ಬಕ್ಕೆ ಬಡಿದ ಪರಿಣಾಮ ಬೋಟ್ ಕೆಳಭಾಗದಲ್ಲಿ ಬಿರುಕು ಬಿಟ್ಟು ನೀರು ತುಂಬಿ ಮುಳುಗಡೆಯಾಯಿತು. ಇದರಿಂದಾಗಿ ಬೋಟ್​ನಲ್ಲಿದ್ದ 500 ಮಾರು ಉದ್ದದ ಬಲೆ, ಮೀನುಗಾರಿಕೆಗೆ ಉಪಯೋಗಿಸುವ ಜಿಪಿಎಸ್, ವೈಯರಲೆಸ್, ಫಿಶ್ ಫೈಂಡರ್, ಇಲೆಕ್ಟ್ರಿಕಲ್ ಉಪಕರಣಗಳು, ದೊಡ್ಡ ಗಾತ್ರದ ಬ್ಯಾಟರಿಗಳು, 500 ಮೀಟರ್ ಉದ್ದದ ಹಗ್ಗ, 1500 ಲೀಟರ್ ಡೀಸೆಲ್ ಹಾಗೂ ಇತರೆ ಸಲಕರಣೆಗಳು ಬೋಟ್​ನೊಂದಿಗೆ ಮುಳುಗಡೆಯಾಗಿವೆ. ಮುಳುಗಡೆಯಾದ ಬೋಟ್ ಹಾಗೂ ಸಲಕರಣೆಗಳ ಮೌಲ್ಯ 70 ಲಕ್ಷ ರೂ. ಗಳಷ್ಟು ಎಂದು ಘಟನೆಯ ಕುರಿತು ಬೋಟ್ ಮಾಲೀಕರು ಹೊನ್ನಾವರ ಸಿಪಿಐ ಅವರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts