More

    ಹುಮನಾಬಾದ್ನಲ್ಲಿ ದೆಹಲಿ ಮಾದರಿ ಪ್ರೌಢ ಶಾಲೆ ಕಟ್ಟಡ ಉದ್ಘಾಟನೆ

    ಹುಮನಾಬಾದ್: ಪಟ್ಟಣದ ಸಕರ್ಾರಿ ಪದವಿಪೂರ್ವ ಬಾಲಕರ ಕಾಲೇಜಿನ ಆವರಣದಲ್ಲಿ ಕಲ್ಯಾಣ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ದೆಹಲಿ ಪಬ್ಲಿಕ್ ಶಾಲೆ ಮಾದರಿಯಲ್ಲಿ ನಿಮರ್ಿಸಲಾದ ಸಕರ್ಾರಿ ಪ್ರೌಢ ಶಾಲೆ ಕನ್ನಡ ಮತ್ತು ಉದರ್ು ಮಾಧ್ಯಮ ಕಟ್ಟಡವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

    ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ಬಡವರ ಹಾಗೂ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶ ಹಾಗೂ ನಾನು ಸಹ ಕಲಿತ ಶಾಲೆಯಾಗಿದ್ದರಿಂದ ಸೇವೆ ಸಲ್ಲಿಸುವ ಸೌಭಾಗ್ಯ ಒದಗಿದ್ದರಿಂದ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ದಿಲ್ಲಿ ಪಬ್ಲಿಕ್ ಶಾಲೆ ಮಾದರಿಯಲ್ಲಿ ಪ್ರೌಢಶಾಲೆ ನಿಮರ್ಿಸಿದ್ದು, ವಿದ್ಯಾಥರ್ಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಜಿಲ್ಲೆಯಲ್ಲಿಯೇ ಶಾಲೆಯ ಕಟ್ಟಡ ಸುಂದರ ಹಾಗೂ ಸುಜ್ಜಿತವಾಗಿ ಮಾದರಿಯಾಗಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಅದರಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ತರುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವಂತೆ ಸಲಹೆ ನೀಡಿದರು.

    ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪುರಸಭೆ ಅಧ್ಯಕ್ಷೆ ನೀತು ಶಮರ್ಾ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪ್ರಮುಖರಾದ ರಾಜಶೇಖರ ಪಾಟೀಲ್ ಮದರಗಾಂವ, ರಮೇಶ ಡಾಕುಳಗಿ, ಕಂಟೆಪ್ಪ ದಾನಾ, ಅಫ್ಸರ್ಮಿಯಾ, ರೇವಣಸಿದ್ದಪ್ಪ ಪಾಟೀಲ್, ಶೋಭಾ ಪರೀಟ್, ಪ್ರಕಾಶ ಬತಲಿ, ಕಾಶೀನಾಥ ಕೊಡ್ಲಿ, ಪಂಢರಿನಾಥ ಹುಗ್ಗಿ, ಶರದಕುಮಾರ ನಾರಾಯಣಪೇಟಕರ್, ಸುರೇಂದ್ರನಾಥ ಹುಡಗಿಕರ್, ಸಿದ್ಧಲಿಂಗ ನಿಣರ್ಾ, ಶೇಕ್ ಮಹೆಬೂಬ್, ಸಚಿನ್ ಮಠಪತಿ ಇತರರಿದ್ದರು. ಉಪಪ್ರಾಚಾರ್ಯ ಜಿ.ಪರಮೇಶ್ವರ ಸ್ವಾಗತಿಸಿದರು. ವೀರಂತರಡ್ಡಿ ಜಂಪಾ ನಿರೂಪಣೆ ಮಾಡಿದರು.

    ಕಟ್ಟಡ ನಿಮರ್ಾಣದ ಪ್ರಥಮ ದಜರ್ೆ ಗುತ್ತಿಗೆದಾರ ಸಿದ್ರಾಮ ಬಿರಾದಾರ್ ಅವರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಂಡು ಶಾಲಾ ಕಟ್ಟಡ ಸುಂದರವಾಗಿ ನಿಮರ್ಿಸಿರುವುದು ಶ್ಲಾಘನೀಯವಾಗಿದೆ.
    | ರಾಜಶೇಖರ ಪಾಟೀಲ್, ಶಾಸಕ

    9 ತರಗತಿ ಕೋಣೆ: ಪ್ರೌಢಶಾಲೆಯ ನೂತನ ಕಟ್ಟಡ ಸುಂದರ ಹಾಗೂ ಸುಸಜ್ಜಿತವಾಗಿ ನಿಮರ್ಿಸಲಾಗಿದೆ. 12500 ಫೀಟ್ ಅಳತೆಯಲ್ಲಿ ನಿಮರ್ಿಸಲಾಗಿದ್ದು, 9 ತರಗತಿ ಕೋಣೆ, ಕಂಪ್ಯೂಟರ್, ಪ್ರಿನ್ಸಿಪಾಲ್, ಸಿಬ್ಬಂದಿ, ಡೈನಿಂಗ್ ಹಾಲ್, ಕಿಚನ್ಗೆ ತಲಾ 1 ಕೋಣೆ ಹಾಗೂ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಒಳಗೊಂಡಿದೆ.

    ಹುಮನಾಬಾದ್-ಕಲಬುರಗಿ ಮೂಲಕ ಬೆಂಗಳೂರು ರೈಲು ಸಂಚಾರಕ್ಕೆ ಒತ್ತಡ: ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಪಾಟೀಲ್, ಕೆಕೆಆರ್ಡಿಬಿ ಮಂಜೂರು ಮಾಡಿದ್ದ 90 ಲಕ್ಷ ರೂ.ಗಳಲ್ಲಿ ನಿಂಬೂರ, ಸಿತಾಳಗೇರಾದಲ್ಲಿ ತಲಾ 3 ಹಾಗೂ ಮರಕಲ್ ಸಕರ್ಾರಿ ಶಾಲೆಯಲ್ಲಿ 2 ತರಗತಿ ಕೋಣೆ ನಿಮರ್ಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 5 ಕೋಟಿ ರೂ.ನಲ್ಲಿ ಪಟ್ಟಣದಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ ಕಟ್ಟಡ ಕೆಲಸ ಮುಗಿಯುವ ಹಂತದಲ್ಲಿದೆ ಎಂದು ತಿಳಿಸಿದರು. ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿವರೆಗಿನ ರಸ್ತೆಯಂತೆ ಗೆಸ್ಟ್ ಹೌಸ್ನಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ಕಾಮಗಾರಿಗೂ ಶೀಘ್ರ ಟೆಂಡರ್ ಕರೆಯಲಾಗುವುದು. ನಂತರ ಕೆಇಬಿ ಬೈಪಾಸ್ವರೆಗಿನ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ಥಳೀಯರ ಬೇಡಿಕೆಯಂತೆ ಬೀದರ್ನಿಂದ ಹುಮನಾಬಾದ್-ಕಲಬುರಗಿ ಮಾರ್ಗವಾಗಿ ಬೆಂಗಳೂರು ಮಧ್ಯೆ ರೈಲು ಆರಂಭಿಸುವಂತೆ ಸಕರ್ಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts