More

    ಹುಬ್ಬಳ್ಳಿ ಯುವತಿಗೆ ಮಿಸ್ ಊರ್ವಶಿ ಕಿರೀಟ, * ಜೈಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಧಾರವಾಡ ದಸರಾ ಸುಂದರಿ, ಮಿಸ್ ಧಾರವಾಡ ಸೇರಿ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಹುಬ್ಬಳ್ಳಿ ಯುವತಿ ವರ್ಶಿನಿ ರಾಮಣಗಿ ಅವರು ಇದೀಗ ರಾಷ್ಟ್ರ ಮಟ್ಟದ ಮಿಸ್ ಊರ್ವಶಿ 2022 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

    ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ 25 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಜಯ ಗಳಿಸಿದ್ದಾಗಿ ವರ್ಶಿನಿ ರಾಮಣಗಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜೈಪುರದ ರಾಜಬಿ ಮೊದಲ ರನ್ನರ್​ಅಪ್, ಸಿಯಾ ರೈಟ್ ಎರಡನೇ ರನ್ನರ್ ಅಪ್ ಪಡೆದರು. ಬಾಲಿವುಡ್ ನಟಿ ಜರೀನ್ ಖಾನ್ ಮಾಡೆಲ್​ಗಳಿಗೆ ಕಿರೀಟ ತೊಡಿಸಿದರು.

    ಇದರ ಜತೆಗೆ ಫ್ಯಾಷನ್ ಐಕಾನ್, ಬೆಸ್ಟ್ ಕಾಸ್ಟೂಮ್ ಸಬ್ ಟೈಟಲ್ ಕೂಡ ಪಡೆದುಕೊಂಡಿರುವ ವರ್ಶಿನಿ ಅವರು, ಸ್ಪರ್ಧೆಯಲ್ಲಿ ಹಲವು ಹಂತಗಳಿದ್ದವು. ಸೌಂದರ್ಯದ ಜತೆಗೆ ವಿವಿಧ ಆಟಗಳು, ಜ್ಞಾನ ಪರೀಕ್ಷೆಗಳು ಅಲ್ಲಿ ನಡೆದವು. ಪ್ರತಿ ಹಂತದಲ್ಲಿ ಜಯ ಸಾಧಿಸುತ್ತ ಹೋದೆ ಎಂದು ಸಂತಸ ಹಂಚಿಕೊಂಡರು.

    ಮಾಡೆಲಿಂಗ್​ನಲ್ಲಿ ಆಸಕ್ತಿ ಹೊಂದಿರುವ ವರ್ಶಿನಿ ಮುಂದಿನ ಗುರಿ ಮಿಸ್ ಇಂಟರ್​ನ್ಯಾಷನಲ್ ಆಗುವುದು. ಇದಕ್ಕೆ ಎಲ್ಲ ಸಹಕಾರ, ಬೆಂಬಲ ನೀಡುವುದಾಗಿ ತಾಯಿ ಮಂಜುಳಾ ರಾಮಣಗಿ ತಿಳಿಸಿದರು.

    ವರ್ಶಿನಿ ಅವರ ಟೀಂನಲ್ಲಿದ್ದ ಫಿದೋಸ್ ಹನ್ಸಿ, ಫರ್ದಿನ್, ಶೌಕತ್​ಖಾನ್, ಜರೀನಾ ಹನ್ಸಿ ಅವರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts