More

    ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟ ಸಿಐಡಿ ತಂಡ

    ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ನಡೆದಿದ್ದ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಕಿಂಗ್​ಪಿನ್ ಕಿರಣ ವೀರನಗೌಡ ಪಾಟೀಲನನ್ನು ಬಂಧಿಸಿರುವ ಸಿಐಡಿ ತಂಡ ಇದೀಗ ಹುಬ್ಬಳ್ಳಿಯಲ್ಲೇ ಬೀಡು ಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡ ಸ್ಥಳ ಮಹಜರು ಮಾಡಲು ಮುಂದಾಗಿದೆ. ಗುರುವಾರ ಉಪನಗರ ಠಾಣೆಗೆ ಆಗಮಿಸಿದ್ದ ಅಧಿಕಾರಿಗಳು ಕೆಲ ಹೊತ್ತು ಚರ್ಚೆ ನಡೆಸಿದರು. ನಂತರ ಕಿರಣನ ಕೇಶ್ವಾಪುರದ ನಿವಾಸಕ್ಕೆ ತೆರಳಿ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟಿರುವ ಸಿಐಡಿ ಹುಬ್ಬಳ್ಳಿ ಕೇಂದ್ರವಾಗಿಟ್ಟುಕೊಂಡು ಓಡಾಟ ನಡೆಸಿದೆ ಎಂದು ತಿಳಿದು ಬಂದಿದೆ.

    ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿ ಬಂಧನ

    ಹುಬ್ಬಳ್ಳಿ: ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪದಡಿ ಬೆಂಡಿಗೇರಿ ಠಾಣೆ ಪೊಲೀಸರು ಗುರುವಾರ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಸಂದೀಪ ದಶರಥ ಸಾಳುಂಕೆ (19) ಬಂಧಿತ ಆರೋಪಿ. ಹೊಸ ಗಬ್ಬೂರು ಬಳಿಯ ಅಪ್ರಾಪ್ತ ಯುವತಿಯೊಬ್ಬಳನ್ನು ಬುಧವಾರ ಯಾರೋ ಅಪಹರಿಸಿಕೊಂಡು ಹೋಗಿದ್ದರು. ಈ ಕುರಿತು ಯುವತಿಯ ಪಾಲಕರು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸಿಪಿ ಪಿ.ಕೆ. ಪಾಟೀಲ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್ ಶ್ಯಾಮರಾಜ ಸಜ್ಜನ ನೇತೃತ್ವದ ತಂಡ ಬಾಲಕಿಯನ್ನು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಶೀಘ್ರ ಡಿಎನ್​ಎ ವರದಿ ನೀಡಲು ಮನವಿ

    ಹುಬ್ಬಳ್ಳಿ: ತಾಲೂಕಿನ ದೇವರಗುಡಿಹಾಳ ಗ್ರಾಮದಲ್ಲಿ ರುಂಡ ಹಾಗೂ ಕೇಶ್ವಾಪುರದಲ್ಲಿ ಮುಂಡ ಸುಟ್ಟು ಹಾಕುವ ಮೂಲಕ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದ ಡಿಎನ್​ಎ ವರದಿ ಈವರೆಗೆ ಪೊಲೀಸರ ಕೈ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ವರದಿ ನೀಡುವಂತೆ ಜಿಲ್ಲಾ ಪೊಲೀಸರು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

    ರಾಕೇಶ ಕಾಟವೆ ಪಾಲಕರ ಪತ್ತೆ ಹಾಗೂ ಮತ್ತಿತರ ಮಹತ್ವದ ಅಂಶಗಳು ಡಿಎನ್​ಎ ವರದಿಯಿಂದ ಸಾಬೀತಾಗಬೇಕಿದೆ. ಆ ಬಳಿಕ ಮೂರು ತಿಂಗಳೊಳಗೆ ಗ್ರಾಮೀಣ ಠಾಣೆ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಬೇಕಾಗಿದೆ. ಆದರೆ, ಡಿಎನ್​ಎ ವರದಿ ಯಾವಾಗ ಕೈ ಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ವರದಿ ಆಧಾರದ ಮೇಲೆಯೇ ದೋಷಾರೋಪಣ ಪಟ್ಟಿ ಸಲ್ಲಿಸಲು ಕಾಯುತ್ತಿದ್ದಾರೆ. ಹೀಗಾಗಿ, ಮೂರು ತಿಂಗಳೊಳಗಾಗಿ ಡಿಎನ್​ಎ ವರದಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

    ಏಪ್ರಿಲ್ 9ರಂದು ನಡೆದಿದ್ದ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುವ ಮೂಲಕ ರೋಚಕತೆ ಪಡೆದಿತ್ತು. ಗ್ರಾಮೀಣ ಠಾಣೆ ಪೊಲೀಸರು ವಾರದೊಳಗೆ ಎಲ್ಲ 8 ಆರೋಪಿಗಳನ್ನು ಬಂಧಿಸಿದ್ದರು. ರಾಕೇಶ ಸಹೋದರಿ ಶನಾಯ ಕಾಟವೆ, ಪ್ರಮುಖ ಆರೋಪಿ ನಿಯಾಜ್ ಕಾಟವೆ ಹಾಗೂ ಸಹಚರರನ್ನು ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts