More

    ಹುನ್ನೂರಲ್ಲಿ ಸಮಾಧಿ ಧ್ವಂಸ

    ಜಮಖಂಡಿ: ತಾಲೂಕಿನ ಹುನ್ನೂರ ಗ್ರಾಮದ ದಲಿತರ ಸ್ಮಶಾನದಲ್ಲಿನ ಸಮಾಧಿಗಳನ್ನು ಧ್ವಂಸಗೊಳಿಸಿ ಜಮೀನು ಕಬಳಿಸಲು ಯತ್ನಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮದ ದಲಿತ ಮುಖಂಡರು ಒತ್ತಾಯಿಸಿದ್ದಾರೆ.

    ಗ್ರಾಮದ ರಿಸನಂ 39/3ಬ, 39/3 ಅ ಜಮೀನುಗಳಲ್ಲಿ ಹಲವು ದಶಕಗಳಿಂದ ಪರಿಶಿಷ್ಟ ಜಾತಿ ಸಮುದಾಯದವರ ಮೃತರ ಶವ ಸಂಸ್ಕಾರ ಮಾಡುತ್ತ ಬರಲಾಗಿದೆ. ಆದರೆ, ಜಮಖಂಡಿ ನಗರದ ರಾಜು ಸುಭಾಷ ಮೀಶಿ ಎನ್ನುವವರು 2019ರ ಮಾರ್ಚ್ 13 ರಂದು ಜಮೀನು ಖರೀದಿ ಮಾಡಿದ್ದೇನೆ ಎಂದು ನಮ್ಮೂರಿನ ಸಮಾಜದ ಹಿರಿಯರ ಜತೆ ಚರ್ಚಿಸದೆ ಏಕಾಏಕಿ ಸ್ಮಶಾನದಲ್ಲಿರುವ ಎಲ್ಲ ಸಮಾಧಿಗಳನ್ನು ನಾಶ ಮಾಡಿದ್ದಲ್ಲದೆ ಅಲ್ಲಿನ ಗಿಡಮರಗಳನ್ನು ಕಡಿದು ಹಾಕಿದ್ದಾರೆ.

    ನೂರಕ್ಕೂ ಅಧಿಕ ವರ್ಷಗಳಿಂದ ನಮ್ಮ ಸಮಾಜದ ಮೃತರನ್ನು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಿರುವ ದಾಖಲೆಗಳಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಹುನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಪ್ಪ ಶಿಂಗೆ, ಮಾಜಿ ಸದಸ್ಯ ದೇವೇಂದ್ರ ಮದರಖಂಡಿ, ಸದಾಶಿವ ಕಂಡಪ್ಪಗೋಳ, ದೇವಾನಂದ ಯಂಕಪ್ಪಗೋಳ, ಸದಾಶಿವ ಕಾಂಬಳೆ, ಶರಣಪ್ಪ ಜಮಖಂಡಿ, ಹಣಮಂತ ಹೊಳೆಪ್ಪಗೋಳ, ಕುಮಾರ ಮುಧೋಳ, ಕಲ್ಲಪ್ಪ ಬಳೋತಿ, ಶಾಂತವೀರ ಪೂಜಾರಿ, ಈಶ್ವರ ಚನ್ನಪ್ಪಗೋಳ, ಮಾರುತಿ ಶಿಂಗೆ, ಸುರೇಶ ಹೊಳೆಪ್ಪಗೋಳ, ಸುರೇಶ ಮದರಖಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದಲಿತರು ಅನೇಕ ವರ್ಷಗಳಿಂದ ಅಂತ್ಯಸಂಸ್ಕಾರ ನಡೆಸುತ್ತ ಬಂದಿದ್ದಾರೆ. ದಲಿತರಿಗೆ ನಗರ ವ್ಯಾಪ್ತಿ ಸೇರಿ ಸುತ್ತಮುತ್ತ 10 ಕಿ.ಮೀ. ದೂರದವರೆಗೆ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲ. ಹುನ್ನೂರು ಗ್ರಾಮದಲ್ಲಿ ಉಂಟಾದ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
    ರಾಜು ಮೇಲಿನಕೇರಿ ಡಿಎಸ್‌ಎಸ್ ರಾಜ್ಯ ಸಂಚಾಲಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts