More

    ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸದ್ದಕ್ಕೆ ಅಸಮಾಧಾನ

    ಕುಶಾಲನಗರ: 2019 ರ ಪೆ.14 ರಂದು ಪುಲ್ವಾಮಾ ದಾಳಿಯಲ್ಲಿ ದೇಶದ 40 ಸೈನಿಕರು ಹುತಾತ್ಮರಾಗಿದ್ದರು. ಆ ವೀರ ಹುತಾತ್ಮ ಯೋಧರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಪುರಸಭೆ ಸಹ ಶ್ರದ್ಧಾಂಜಲಿ ಸಲ್ಲಿಸದಿರುವುದಕ್ಕೆ ಕುಶಾಲನಗರದ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಕುಶಾಲನಗರದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ, 2 ನಿಮಿಷ ಮೌನ ಆಚರಿಸಿದರು. ಬಳಿಕ ಅಲ್ಲಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ತೆರಳಿ, ಅಲ್ಲಿ ಕ್ಯಾಂಡಲ್ ಹಚ್ಚಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.


    ಈ ವೇಳೆ ಮಾಜಿ ಯೋಧ ಸುಧೀರ್ ಮಾತನಾಡಿ, ಜ.26 ಮತ್ತು ಆ.15ರಂದು ಮಾತ್ರ ಯೋಧರನ್ನು ನೆನದರೆ ಸಾಲದು. ಇಂತಹ ದಿನವನ್ನು ಅತ್ಯಂತ ಗೌರವಪೂರ್ವಕವಾಗಿ ಆಚರಿಸುವ ಮೂಲಕ ಯುವ ಜನಾಂಗದಲ್ಲಿ ದೇಶ ಪ್ರೇಮ ಹೆಚ್ಚಿಸಬೇಕು. ಸಂಘ-ಸಂಸ್ಥೆಗಳು, ಸಾರ್ವಜನಿಕರು, ಶಾಲಾ ಕಾಲೇಜುಗಳಲ್ಲಿ ಹಾಗೂ ಕುಶಾಲನಗರ ಪುರಸಭೆ ಈ ದಿನದ ಮಹತ್ವದ ದಿನವನ್ನಾಗಿ ಆಚರಿಸದಿರುವುದು ಶೋಚನೀಯ. ಇದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
    ಕ್ಯಾಪ್ಟನ್ ಸುಬ್ಬಯ್ಯ ಮಾತನಾಡಿ, ವ್ಯಾಲೆಂಟೈನ್ಸ್ ಡೇ ಆಚರಣೆ ಬದಲು ದೇಶಪ್ರೇಮ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿದೆ. ಕನಿಷ್ಠ ಮುಂದಿನ ವರ್ಷವಾದರೂ ಈ ದಿನವನ್ನು ಸೈನಿಕರ ದಿನವನ್ನಾಗಿ ಆಚರಣೆ ಮಾಡಿ, ಹುತಾತ್ಮರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

    ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಎ.ಕೆ.ಶೇಖರನ್, ಎನ್.ಕೆ.ತಮ್ಮಯ್ಯ, ಮೊಹಮ್ಮದ್ ನಭಿ, ಎ.ಯು.ಧರ್ಮಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts