More

    ಹುಕ್ಕಾ ನಿಷೇಧ ಪರಿಣಾಮಗಾರಿಯಾಗಲಿ

    ಯಾದಗಿರಿ: ಯುವಕರ ಆರೋಗ್ಯ ಮಾರಕವಾಗಿರುವ ಹುಕ್ಕಾ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸರಕಾರ ನಿಷೇಧಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆಯಿಂದ ಶನಿವಾರ ಇಲ್ಲಿನ ಅಪರ ಜಿಲ್ಲಾಧಿಕರಿಗೆ ಮನವಿ ಸಲ್ಲಿಸಲಾಯಿತು.

    ರಾಜ್ಯದಲ್ಲಿ ಹುಕ್ಕಾ ಮಾಧಕ ವಸ್ತುವನ್ನು, ಹುಕ್ಕಾ ಬಾರ್ಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ನಿಷೇಧಿಸುವ ಸರಕರದ ನಿಧರ್ಾರಕ್ಕೆ ಸಂಘಟನೆ ಅಭಿನಂದಿಸುತ್ತದೆ. ಅದರಂತೆ ಈ ಆದೇಶ ಪರಿಣಾಮಗಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ. ಸಾರ್ವಜನಿಕ ಸ್ಥಳಗಳಳ್ಲಿ ತಂಬಾಕು ಉತ್ಪನ್ನಗಳ ಬಳಕೆ ಅವ್ಯಾಹತವಾಗಿ ನಡೆದಿದ್ದು, ಇದರಿಂದ ಯುವಕರು ಹಾದಿ ತಪ್ಪುತ್ತಿದ್ದಾರೆ ಎಂದು ಸಂಘಟನೆ ಪದಾಧಿಕಾರಿಗಳು ವಿವರಿಸಿದರು.

    ಹುಕ್ಕಾ ಬಳಕೆಯಿಂದ ವೈಜ್ಞಾನಿಕವಾಗಿ ಯಾವ ರೀತಿಯ ಪರಿಣಾಮ ಯುವ ಜನತೆ ಮತ್ತು ವಿದ್ಯಾಥರ್ಿಗಳ ಮೇಲೆ ಬೀರುತ್ತಿದೆ ಎಂಬುದು ಹಲವು ಪ್ರಕರಣಗಳಲ್ಲಿ ನಾವು ಕಂಡಿದ್ದೇವೆ. ದೇಶದ ಉಜ್ವಲ ಭವಿಷ್ಯವಾಗಬೇಕಾದ ಯುವ ಜನತೆ ಈ ರೀತಿಯ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಸಾರ್ವಜನಿಕರಿಗೆ, ವಿಶೇಷವಾಗಿ ಯುವ ವಯಸ್ಕರಿಗೆ ಹುಕ್ಕಾ ಧೂಮಪಾನದ ಅಪಾಯಗಳ ಬಗ್ಗೆ ಸರಕಾರ ತಿಳಿವಳಿಕೆ ಮೂಡಿಸಬೇಕು. ನಿಯಮಿತವಾಗಿ ತಪಾಸಣೆ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ಸೇರಿ ನಿಷೆೇಧದ ಕಟ್ಟುನಿಟ್ಟಾದ ಅನುಸರಣೆಗೆ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts