More

    ಹಿರೇಬಾಗೇವಾಡಿ ಮೇಲ್ದರ್ಜೆಗೇರಿಸಲು ಕ್ರಮ

    ಹಿರೇಬಾಗೇವಾಡಿ: ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮವು ಪುರಸಭೆ ಅಥವಾ ಪಟ್ಟಣ ಪಂಚಾಯಿತಿಯಾಗು ಎಲ್ಲ ಅರ್ಹತೆ ಹೊಂದಿದ್ದು, ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡುತ್ತೇನೆ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸದಸ್ಯರ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗೆ ಸಮೀಪ ಇರುವ ಗ್ರಾಮ ಹೆಚ್ಚು ಜನಸಂಖ್ಯೆ ಹೊಂದಿದೆ. ಮೇಲ್ದರ್ಜೆಗೇರುವ ಎಲ್ಲ ಅವಕಾಶಗಳಿದ್ದರೂ ಸರ್ಕಾರದ ನಿರ್ಣಯಗಳು ನಮ್ಮ ಪರವಾಗಿ ಇಲ್ಲದ ಕಾರಣ ವಿಳಂಬವಾಗುತ್ತಿದೆ. ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

    ಅಭಿವೃದ್ಧಿ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಜನರಿಗೆ ತಲುಪಿಸಬೇಕು ಎನ್ನುವುದು ಸರ್ಕಾರದ ನಿಯಮ. ಹಾಗಾಗಿ ಬಹಳಷ್ಟು ಕೆಲಸ ಗ್ರಾಪಂನಿಂದ ಅನುಷ್ಠಾನಗೊಳ್ಳುತ್ತವೆ. ಕೇಂದ್ರ ಸರ್ಕಾರದ ಜಲ ಜೀವನ ಮಿಷನ್ ಯೋಜನೆ ವಿಚಾರದಲ್ಲಿ ಪಂಚಾಯಿತಿ ಸದಸ್ಯರ ವಿಶ್ವಾಸ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

    ಗ್ರಾಮ ಪಂಚಾಯಿತಿಗೆ ಹೊಸ ಕಟ್ಟಡ ನಿರ್ಮಿಸಿ ಕೊಡಲು ಹಾಗೂ ಕಸ ವಿಲೇವಾರಿಗೆ ಜಾಗ ನೀಡುವಂತೆ ಆಗ್ರಹಿಸಿ ಸದಸ್ಯರು ಕವಟಗಿಮಠ ಅವರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಸ್ವಾತಿ ಅಡಿವೇಶ ಇಟಗಿ, ಉಪಾಧ್ಯಕ್ಷೆ ನಾಜರೀನ್‌ಬಾನು ಕರಿದಾವಲ್, ಸದಸ್ಯರಾದ ಈರಪ್ಪ ಅರಳೀಕಟ್ಟಿ, ಸುರೇಶ ಇಟಗಿ, ಖತಾಲಬಿ ಗೋವೆ, ವಿಜಯ ಮಠಪತಿ, ಸಂಜಯ ದೇಸಾಯಿ, ಸದ್ದಾಂ ಹುಸೇನ್ ನದಾಫ, ಶ್ರೀಕಾಂತ ಮಾಧುಭರಮಣ್ಣವರ, ರಾಣಿ ಆನಂದ ನಂದಿ, ಆನಂದ ಪಾಟೀಲ, ಪಿಡಿಒ ಉಷಾ ಸಾವಳಗಿ, ಅಡಿವೇಶ ಇಟಗಿ, ಚೇತನ ಅಂಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts