More

    ಹಿರಿಯರ ಗೌರವಿಸುವುದು ಭಾರತ ಸಂಸ್ಕೃತಿ

    ಯಕ್ಕುಂಡಿ: ಭಾರತ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ದೇಶದ ಸಂಸ್ಕೃತಿ ಉನ್ನತವಾದದ್ದು. ಪೂಜ್ಯರಿಗೆ ಹಾಗೂ ತಂದೆ-ತಾಯಿಯರಿಗೆ ಪೂಜ್ಯ ಭಾವನೆ ತೋರಿಸುವುದು, ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಬೆಳಗಾವಿಯ ಕಾಡಾ ಅಧ್ಯಕ್ಷ ಡಾ.ವಿ.ಐ.ಪಾಟೀಲ ಹೇಳಿದರು.

    ಯಕ್ಕುಂಡಿಯ ಕುಮಾರೇಶ್ವರ ವಿರಕ್ತಮಠದ ಪೀಠಾಧಿಕಾರಿ ಪಂಚಾಕ್ಷರ ಸ್ವಾಮೀಜಿಗಳ ಷಷ್ಟ್ಯಬ್ದಿ ಹಾಗೂ ನೂತನ ಕುಮಾರೇಶ್ವರ ವಿರಕ್ತಮಠದ ಲೋಕಾರ್ಪಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಬಸವ ಪುರಾಣ ಕಾರ್ಯಕ್ರಮದಲ್ಲಿ ಪಂಚಾಕ್ಷರ ಶ್ರೀಗಳ ತುಲಾಭಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಇವತ್ತಿನ ದಿನಮಾನಗಳಲ್ಲಿ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಜತೆಗೆ ಉತ್ತಮ ಸಂಸ್ಕಾರ ಕೊಡುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.

    ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಬಸವಣ್ಣನವರ ತತ್ತ್ವ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ತೊರಗಲ್ ಚನ್ನಮಲ್ಲ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸವದತ್ತಿಯ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ, ನಾಗನಗೌಡ್ರು ಭರಮಗೌಡರ, ಮಹಾಂತೇಶ ಕರ್ಜಗಿಮಠ, ಎ್.ವೈ.ಭೈರನ್ನವರ, ಸಂಜೀವಕುಮಾರ ತುಳಜನ್ನವರ, ಪ್ರವಚನಕಾರ ರಘುನಂದ ಶಾಸಿ, ಹಿರಿಯರಾದ ಬಸವರಾಜ ಹೊಂಗಲ, ಶಂಕರಗೌಡ ಪಾಟೀಲ, ಅಬ್ದುಲ್‌ಖಾದರ್ ಜೈಲಾನಿ ಬಾರಿಗಿಡದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts