More

    ಹಿಜಾಬ್ ಹಾಕಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧ

    ಬಂಗಾರಪೇಟೆ: ಹೈಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ಬಂಗಾರಪೇಟೆ ಬಾಲಕಿಯರ ಕಾಲೇಜು ಹಾಗೂ ಕೆ.ಸಿ.ರೆಡ್ಡಿ ಕಾಲೇಜಿನಲ್ಲಿ ವಸ್ತ್ರ ಸಂಘರ್ಷ ಮತ್ತೆ ಮುಂದುವರಿದಿದೆ. ಹಿಜಾಬ್ ವಿವಾದದ ಬಳಿಕ 5 ದಿನಗಳಿಂದ ಮುಚ್ಚಿದ್ದ ಶಾಲೆ ಮಂಗಳವಾರದಿಂದ ಪ್ರಾರಂಭಗೊಂಡಿದ್ದು, ಬುಧವಾರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದರಿಂದ ಗೊಂದಲ, ಆತಂಕ ಮುಂದುವರಿಯಿತು.

    ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಕೆಸಿ ರೆಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಪಾಲಕರಿಂದ ಸಣ್ಣ-ಪುಟ್ಟ ಗಲಾಟೆ, ವಾದ ನಡೆಯಿತು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ನ್ಯಾಯಾಲಯದ ಆದೇಶ ಬಗ್ಗೆ ತಿಳಿ ಹೇಳಿ ಕಾಲೇಜು ಕೊಠಡಿಯಲ್ಲಿ ಹಿಜಾಬ್ ತೆಗೆಯಲು ಸೂಚಿಸಿದರು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ದೇವರಾಜ್ ಇರುವವರೆಗೂ ಅವರು ಹೇಳಿದಕ್ಕೆಲ್ಲ ತಲೆ ಆಡಿಸಿದರು. ಅವರು ಹೋದ ನಂತರ ಹಿಜಾಬ್ ಹಾಕಲು ಅನುಮತಿ ನೀಡುವವರೆಗೆ ತರಗತಿಗೆ ಬರುವುದಿಲ್ಲ ಎಂದು ಹಠ ಹಿಡಿದರು. ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ ನಂತರ ವಿದ್ಯಾರ್ಥಿನಿಯರು ಮನೆಗೆ ವಾಪಸಾದರು.

    ವಿದ್ಯಾರ್ಥಿನಿಯರಿಗೆ ಈಗಾಗಲೆ ಉರ್ದು ಶಿಕ್ಷಕರಿಂದ ತಿಳಿವಳಿಕೆ ನೀಡಲಾಗಿದೆ. ಆದರೂ ಕೆಲವರು ಹಿಜಾಬ್ ಧರಿಸಿ ಬಂದಿದ್ದು, ಅವರಿಗೆ ಪ್ರವೇಶ ಕಲ್ಪಿಸಿಲ್ಲ ಎಂದು ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಂಕರಯ್ಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts