More

    ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ

    ಶಿಕಾರಿಪುರ: ಸರ್ಕಾರ ಉಪೇಕ್ಷಿತ ಬಂಧುಗಳ ಅಭ್ಯುದಯಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
    ಬುಧವಾರ ಪಟ್ಟಣದ ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ತಾಲೂಕು ಎಸ್‍ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳು ಅತ್ಯಂತ ಪರಿಶ್ರಮಿಗಳು. ಸದಾ ಕಾಯಕನಿರತರಾಗಿರುವ ಇವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿz್ದÁರೆ. ಎಸ್‍ಟಿ ಸಮಾಜ ಇನ್ನೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಬಲಿಷ್ಠ ವಾಗಬೇಕು ಎಂದರು.
    ಸ್ವಾತಂತ್ರ್ಯ ನಂತರ ಭಾರತವನ್ನು ಬಹಳಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ 2014ರವರೆಗೆ ವಿ-Àಲವಾಗಿತ್ತು. ಅಗತ್ಯವಾದ ಮನೆ, ನೀರು, ರಸ್ತೆ, ಶಿಕ್ಷಣದ ಕಡೆಗೆ ಒತ್ತು ಕೊಡದೆ ಕೇವಲ ಅ„ಕಾರ ನಡೆಸಿತ್ತು. ಸ್ವಾತಂತ್ರ್ಯ ನಂತರದಿಂದ 2014ರವರೆಗೆ 24 ಲಕ್ಷ ಮನೆಗಳಿಗೆ ನಳದ ವ್ಯವಸ್ಥೆಯಿತ್ತು. 2014ರ ನಂತರ ಇಲ್ಲಿಯವರೆಗೆ 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಯ ವ್ಯವಸ್ಥೆಯಾಗಿದೆ. 2014ಕ್ಕಿಂತ ಮುಂಚೆ 6,750 ಕಿಲೋಮೀಟರ್ ಹೆz್ದÁರಿಯನ್ನು ನಿರ್ಮಾಣ ಮಾಡಲಾಗಿತ್ತು. ನಂತರದ ವರ್ಷಗಳಲ್ಲಿ 18,560 ಕಿ.ಮೀ ಹೆz್ದÁರಿಯನ್ನು ನಿರ್ಮಾಣ ಮಾಡಲಾಗಿದೆ ಇದಕ್ಕೆ 1.15 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ. ನಾಡಿನ ಯುವಶಕ್ತಿಯ ಅಭಿವೃದ್ಧಿಗೆ ಒತ್ತು ನೀಡಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
    ಒಂದು ಕಾಲದಲ್ಲಿ ಕೇವಲ ಒಬ್ಬ ಸದಸ್ಯರಿದ್ದ ಕರ್ನಾಟಕ ವಿಧಾನಸಭೆಯಲ್ಲಿ ಸರ್ಕಾರ ರಚಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲಾಗಿ ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದೆ.  ಎಪ್ಪತ್ತರ ದಶಕದಲ್ಲಿ ಕಾಲ್ನಡಿಗೆಯಲ್ಲಿ ಬಸ್‍ನಲ್ಲಿ ರಾಜ್ಯಾದ್ಯಂತ ಓಡಾಡಿ ಯಡಿಯೂರಪ್ಪ ಅವರು ಬಿಜೆಪಿ ಕಟ್ಟಿದರು ಎಂದು ಹೇಳಿದರು.
    ರಾಜ್ಯದ ವಿವಿಧ ಕಡೆಗಳಲ್ಲಿ ಸಮಾವೇಶಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ.  ಎಲ್ಲ ಕಡೆಗಳಲ್ಲಿಯೂ ಪಕ್ಷಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಧಾರೆಗಳು, ಅಂತಾರಾಷ್ಟ್ರೀಯ ನಿಲುವುಗಳು, ಪ್ರಖರ ರಾಷ್ಟ್ರೀಯತೆ ಜತೆಗೆ ಎಲ್ಲ ಕ್ಷೇತ್ರಗಳಿಗೆ ಪ್ರಾತಿನಿಧ್ಯ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಜನಮನದಲ್ಲಿ ಅಚ್ಚಳಿಯದ ಹಾಗೆ ಉಳಿದಿದೆ ಎಂದು ಹೇಳಿದರು.
    ಎಂಎಡಿಬಿ ಅಧ್ಯಕ್ಷ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಬಿಜೆಪಿ ರೈತರ, ಯುವಕರ, ಬಡವರ, ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಕೆಲಸವನ್ನು ಮಾಡುತ್ತಿದೆ. ಯಡಿಯೂರಪ್ಪ ಅವರ ತಾಕತ್ತು ಮತ್ತು ರೈತರ ಪರವಾದ ನಿಜವಾದ ಕಾಳಜಿ ಅನನ್ಯ ಎಂದರು.
    ಜಿ¯್ಲÁ ಎಸ್‍ಟಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ ,ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಸಣ್ಣ ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಬಿ.ಡಿ.ಭೂಕಾಂತ್, ತಾಲೂಕು ಎಸ್.ಟಿ.ಮೋರ್ಚಾ ಅಧ್ಯಕ್ಷ ಸುರೇಶ್, ತಾಲೂಕು ಬಿಜೆಪಿ ಅಧÀ್ಯಕ್ಷ ವೀರೇಂದ್ರ ಪಾಟೀಲï, ರಾಜ್ಯ ನಿರ್ದೇಶಕ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕ ಹೂವಿನಮಂಡಿ ಸುರೇಶ್, ಶಿವಮೊಗ್ಗ ಪ್ರಭಾರಿ ಸುಧಾಮಣಿ ಬೋರಯ್ಯ ಇತರರಿದ್ದರು.

    ಜಿಲ್ಲೆ ಅಭಿವೃದ್ಧಿಯಿಂದ ಪ್ರಕಾಶಳ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರ್ತತ್ವಶಕ್ತಿ ಮತ್ತು ಬಿ.ವೈ.ರಾಘವೇಂದ್ರ ಅವರ ಪರಿಶ್ರಮದ -Àಲವಾಗಿ ಇಡೀ ಜಿ¯್ಲÉ ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ. ಒಬ್ಬ ಅಪರೂಪದ ಸಂಘಟಕರಾಗಿರುವ ಬಿ.ವೈ.ವಿಜಯೇಂದ್ರ ಅವರು ನಾಡಿನಾದ್ಯಂತ ಓಡಾಡಿ ಬಿಜೆಪಿ ಬಲಪಡಿಸುತ್ತಿz್ದÁರೆ ಎಂದು ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಹೇಳಿದರು. ಪಕ್ಷ ಸಮುದಾಯದ ಹಿತಕ್ಕಾಗಿ ಸಾಕಷ್ಟು ಯೋಜನೆ, ಸವಲತ್ತು ನೀಡಿದೆ. ರಾಜ್ಯಾದ್ಯಂತ ಸಮುದಾಯದ ಭವನಗಳು, ಮಠ ಮಂದಿರಗಳಿಗೆ ಯಡಿಯೂರಪ್ಪ ಅನುದಾನ ನೀಡಿz್ದÁರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts