More

    ಹಾಸ್ಟೆಲ್ ಸಮಸ್ಯೆ ಪರಿಹರಿಸಲು ಒತ್ತಾಯ

    ಕಲಬುರಗಿ: ಕಾಲೇಜುಗಳಿಗೆ ಬೇಗ ಹೋಗಲು ಅನುವು ಮಾಡಿಕೊಡಲು ಈಗಿರುವ ವಸತಿ ನಿಲಯದಿಂದ ಕಾಲೇಜು ಸಮೀಪದ ವಸತಿ ನಿಲಯಕ್ಕೆ ವರ್ಗಾಯಿಸಬೇಕು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿರಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ನಗರದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರೆಯಂತೆ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ ರಸ್ತೆ ತಡೆದರು. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಅವರು ಓದುವ ಕಾಲೇಜು ೮-೧೦ ಮೀ ದೂರ ಆಗುವುದರಿಂದ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಕಾಲೇಜಿಗೆ ಹೋಗಲಾಗುತ್ತಿಲ್ಲ. ಹೀಗಾಗಿ ಅವರ ಕಾಲೇಜು ಸಮೀಪದ ಹಾಸ್ಟೆಲ್‌ಗಳಿಗೆ ಶಿಫ್ಟ್ ಮಾಡುವಂತೆ ಕೋರಿದರು.

    ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ವಸತಿ ನಿಲಯದಲ್ಲಿ ಪ್ರವೇಶ ಸಿಕ್ಕಿಲ್ಲ. ಊರುಗಳಿಂದ ನಿತ್ಯ ೪೦-೫೦ ಕಿಮೀ ಪಯಣಿಸಿ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಅವರಿಗೆ ನಗರದ ವಿವಿಧ ಹಾಸ್ಟೆಲ್‌ಗಳಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿದರು.

    ಎವಿಬಿಪಿ ನಗರ ಕಾರ್ಯದರ್ಶಿ ತಾಯಪ್ಪ ಯಾದವ್, ವಿದ್ಯಾರ್ಥಿಗಳಾದ ಕ್ಯಾತಪ್ಪ ಮೇದಾ, ರವಿ ಕೋಲಕರ, ಅಮರನಾಥ, ಪ್ರಶಾಂತ ಕಪನೂರ, ಕರಣ, ಸುರೇಶ, ಅಶ್ವಿನಿ, ಭಾಗ್ಯಶ್ರೀ, ಆರತಿ, ಮನೋಜ, ಮಲ್ಲಿಕಾರ್ಜುನ, ವಿಜಯಕುಮಾರ, ರಮೇಶ ಮೊದಲಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts