More

    ಹಾಸ್ಟೆಲ್ ಊಟ ಮಾಡಿದ ವಿದ್ಯಾರ್ಥಿಗಳು ಅಸ್ವಸ್ಥ

    ವಿಜಯವಾಣಿ ಸುದ್ದಿಜಾಲ
    ಹಳಿಯಾಳ(ಉತ್ತರ ಕನ್ನಡ) : ಪಟ್ಟಣದ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸೋಮವಾರ ರಾತ್ರಿ ಆಹಾರ ಸೇವಿಸಿದ 17 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ತಡರಾತ್ರಿ ನಡೆದಿದೆ.

    40 ಮಕ್ಕಳು ಇರುವ ಈ ವಸತಿ ನಿಲಯದಲ್ಲಿ ಸೋಮವಾರ ರಾತ್ರಿ ಎಂದಿನಂತೆ ಊಟ ಮಾಡಿದಬ ವಿದ್ಯಾರ್ಥಿಗಳು ಕೆಲ ಹೊತ್ತಿನಲ್ಲಿ ಹೊಟ್ಟೆ ನೋವು, ವಾಂತಿ ಸೇರಿದಂತೆ ಆರೋಗ್ಯ ಏರು ಪೇರಾಗಿ ಅಸ್ವಸ್ಥರಾಗಿದ್ದಾರೆ.

    ತಕ್ಷಣ ವಸತಿ ನಿಲಯ ಮೇಲ್ವಿಚಾರಕ ವಿಜಯಕುಮಾರ ಪಾಟೀಲ್ ಅವರು ಸಿಬ್ಬಂದಿ ಸಹಾಯದೊಂದಿಗೆ ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸುಮಾರು 2 ಗಂಟೆಗಳ ಬಳಿಕ ವಿದ್ಯಾರ್ಥಿಗಳು ನಿಧಾನವಾಗಿ ಚೇತರಿಸಿಕೊಂಡಿದ್ದಾರೆ.

    ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಪಿ.ಜಿ. ಶಿಂಧೆ , ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ , ಜಯ ಕರ್ನಾಟಕ ಸಂಘಟನೆ ಘಟ್ಟದ ಮೇಲಿನ ಜಿಲ್ಲಾ ಅಧ್ಯಕ್ಷ ವಿಲಾಸ‌ ಕಣಗಲಿ ಹಾಗೂ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts