More

    ಹಾಸ್ಟೆಲ್‌ಗಳಲ್ಲಿ ಶುಚಿತ್ವ ಕಾಪಾಡಲು ಎಡಿಸಿ ತಾಕೀತು

    ಚಿತ್ರದುರ್ಗ: ವಸತಿ ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನಿಲಯದ ಪಾಲಕರೇ ಪೋಷಕರಾಗಿದ್ದು,ಈ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ
    ಕಾಣಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿಲಯ ಪಾಲಕರಿಗೆ ಸಲಹೆ ನೀಡಿದರು.
    ಜಿಲ್ಲಾಡಳಿತ ಹಾಗೂ ಜಿಪಂದಿಂದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿಗೆ ನಗರದ ತರಾಸು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ತಪ್ಪು ಮಾಡಿದರೆ ಅವ ರನ್ನು ಎಚ್ಚರಿಸ ಬೇಕು. ಉತ್ತಮ ಕೆಲಸ ಮಾಡಿದಾಗ ಗೌರವಿಸಿ,ಪ್ರೀತಿ ತೋರಬೇಕು.
    ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಶುಚಿತ್ವವನ್ನು ಕಾಪಾಡಿ ಕೊಳ್ಳ ಬೇಕು. ಶಾಲೆ ಹಾಗೂ ನಿಲಯಗಳ ಎಲ್ಲ ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸದರೆ ಹಾಸ್ಟೆಲ್‌ಗಳು ಸ್ವರ್ಗ,ಇಲ್ಲವಾದಲ್ಲಿ ನರಕವಾಗುತ್ತವೆ. ಹೊಂದಾಣಿಕೆ ಕೊರತೆ ಮಕ್ಕಳ ಮೇಲೆ ದುಷ್ಪರಿಣಾಮ ಬೀಳಲಿದೆ.
    ಬಡ, ಮಧ್ಯಮವರ್ಗದ ಮಕ್ಕಳು ಹಾಸ್ಟೆಲ್‌ಗೆ ಪ್ರವೇಶ ಪಡೆದಿರುತ್ತಾರೆ.
    ಸರ್ಕಾರದ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ,ನೀರು ಹಾಗೂ ಶುಚಿತ್ವದೊಂದಿಗೆ ಹಾಸ್ಟೆಲ್‌ಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಚಿತ್ವದ ಕೆಲಸಗಳನ್ನು ಮಾಡಿಸಬಾರದು ಎಂದರು.
    ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಗ್ರಂಥಾಲಯ ಹಾಗೂ ದಿನಪತ್ರಿಕೆಗಳಿರ ಇರಬೇಕು. ಸಂಪನ್ಮೂಲವ್ಯಕ್ತಿಗಳಿಂದ ಕಾರ್ಯಾಗಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದರು.
    ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್‌ಹೆಬ್ಬಳ್ಳಿ ಮಾತನಾಡಿ,ಜಿಲ್ಲೆಯ ಎಲ್ಲಾ ವಸತಿ ನಿಲಯಗಳ ನಿಲಯ ಪಾಲಕರು,ವಸತಿ ಶಾಲೆಗಳ ಪ್ರಾಂಶುಪಾಲರು, ನಿಲಯ ಪಾಲಕರು, ಅಡುಗೆ ಸಿಬ್ಬಂದಿಗೆ ಪುನಶ್ವೇತನ ತರಬೇತಿ ನೀಡಲಾಗುತ್ತಿದೆ. ನಿಲಯ ನಿರ್ವಹಣೆ ಹೇಗಿರ ಬೇಕು. ನಿಲಯ ನಿರ್ವಹಣೆಯಲ್ಲಿ ವಹಿಸಬೇಕಾದ ಜಾಗೃತಿ ಕುರಿತಂತೆ ತರಬೇತಿ ಆಯೋಜಿಸಲಾಗಿದೆ ಎಂದರು.
    ಸಂವಿಧಾನ ಜಾಗೃತಿ ಕಾರ‌್ಯಕ್ರಮದ ಅಂಗವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ ಅವರು ಶಾಲೆ ಹಾಗೂ ನಿಲಯದ ಸಿಬ್ಬಂದಿಗೆ ಸಂವಿಧಾನ ಪೀಠಿಕೆ ಬೋಧಿಸಿದರು.
    ನಿಲಯಗಳ ಶುಚಿತ್ವ,ದಾಸ್ತಾನು ಕೊಠಡಿ ನಿರ್ವಹಣೆ,ಶುಚಿಯಾದ ಆಹಾರ ಹಾಗೂ ಸಂರಕ್ಷಣೆ, ಸೆಪ್ಟಿಕ್‌ಟ್ಯಾಂಕ್ ಹಾಗೂ ಕುಡಿಯುವ ನೀರು, ದಾಖಲಾತಿ ನಿರ್ವಹಣೆ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಜಿಲ್ಲಾ ಅಂಕಿತ ಅಧಿಕಾರಿ ಡಾ.ಪಾಲಾಕ್ಷಪ್ಪ,ಗ್ರಾಮೀಣ ಕು ಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಪ್ರಜ್ವಲ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ದಿನೇಶ್,ಟಿ.ಎನ್.ಮಾಲತಿ,ಕುಮಾರಸ್ವಾಮಿ,ಕಾಳಮ್ಮ,ಮಂಜುನಾಥ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts